Wednesday, August 17, 2011

ಗಬ್ಬುವಾಸನೆ ಎಂಬ ಪದ್ಯವೂ..ಬಸವರಾಜ ಸಬರದ ಎಂಬ ಗಬ್ಬುವಾಸನೆಯೂ

ಸ್ನೇಹಿತರೆ, ೧೩ ಆಗಷ್ಟ ೨೦೧೧ ರಂದು ಬೆಂಗಳೂರಿನಲ್ಲಿ  ಕನ್ನಡ ಸಂಸ್ಕೃತಿ ಇಲಾಖೆಯು ಭಾಷಾ ಸಾಮರಸ್ಯ ದಿನವನ್ನಾಗಿ ಆಚರಿಸಿತು. ಇದನ್ನು ಯು.ಆರ್. ಅನಂತಮೂರ್ತಿಗಳು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಬಹುಬಾಷಾ ಕವಿಗೋಷ್ಠಿಯೂ ಇತ್ತು. ಈ ಕವಿಗೋಷ್ಠಿಯಲ್ಲಿ ತೆಲುಗು, ತಮಿಳು, ತುಳು, ಉರ್ದು, ಮಲಯಾಳಂ, ಕೊಂಕಣಿ, ಇಂಗ್ಲೀಷ್, ಕನ್ನಡ ಮುಂತಾದ ಭಾಷೆಯ ಕವಿಗಳು ಬಂದಿದ್ದರು.  ಈ ಕವಿಗೋಷ್ಠಿಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗದ ಪ್ರೊಫೆಸರ್ ಬಸವರಾಜ ಸಬರದ ಅವರು ಭಾಗವಹಿಸಿ ಕವನವನ್ನು ಆಕರ್ಶಕವಾಗಿ ವಾಚಿಸಿದರು. ಆ ಕವನದ ಹೆಸರು ` ಗಬ್ಬು ವಾಸನೆ' ಎನ್ನುವುದು.

ಈ ಪದ್ಯದ ಸಾರಾಂಶವೆಂದರೆ, ಬಜಾರು, ಮಠ, ಗುಡಿ, ಶಾಲೆ ಮುಂತಾದ ಯಾವುದೇ ಪ್ರದೇಶಕ್ಕೂ ಹೋದರೂ ಕವಿಗೆ ಗಬ್ಬು ವಾಸನೆ ಬಡಿಯುತ್ತದೆ. ಹೀಗೆ ಗಬ್ಬು ವಾಸನೆ ಬರುವುದನ್ನು ಇತರರಲ್ಲಿ ಕೇಳಿದರೆ, ಅದು ಮತ್ಯಾರಿಗೂ ಬರುವುದಿಲ್ಲ. ಹಾಗಾಗಿ ಎಲ್ಲರೂ ನಿನ್ನ ಮೂಗು ಕೆಟ್ಟಿರಬಹುದೆಂದು ಕವಿಯನ್ನು ಹಿಯಾಳಿಸುತ್ತಾರೆ. ಹಾಗಾಗಿ ಕವಿಗೆ ಗೊಂದಲ ಶುರುಚಾಗುತ್ತದೆ. ಗಬ್ಬು ವಾಸನೆ ನನಗೆ ಮಾತ್ರ ಬರುತ್ತಿದೆಯೋ ಜಗತ್ತಿನಾದ್ಯಾಂತ ಆವರಿಸಿರುವ ಗಬ್ಬು ವಾಸನೆ ಜನಕ್ಕೆ ಯಾಕೆ ತಾಕುತ್ತಿಲ್ಲ ಎಂದೆಲ್ಲಾ ಕವಿ ಜಿಜ್ಗಾಸೆ ಮಾಡುವಂತೆ ಕಾವ್ಯ ಮುಗಿಯುತ್ತದೆ. ಪದ್ಯ ಓದುತ್ತಿದ್ದಂತೆ ಇಡೀ ಸಭೆಯೂ ಗಬ್ಬು ವಾಸನೆ ಬಡಿಯುವ ಅನುಭವವಾಗುತ್ತದೆ.
ಇರಲಿ ಕಾವ್ಯ ಈ ಕಾಲದ ಸಂಗತಿಯನ್ನು ಆಧರಿಸಿ ಅಸಾಹಯಕ ಸ್ಥಿತಿಯಲ್ಲಿ ಹುಟ್ಟಿದೆ. ಕಾವ್ಯ ವಾಚ್ಯವಾಗಿದ್ದರೂ ಈ ಕಾಲವನ್ನು ನಿರೂಪಿಸುವ ರೂಪಕದಂತಿದೆ ಸರಿ. ಇದನ್ನು ಓದುತ್ತಿದ್ದರೆ ಮೊಗಳ್ಳಿ ಗಣೇಶ್ ಅವರ ಕಥೆ ಬುಗುರಿ ನೆನಪಾಗುತ್ತದೆ.

ಇಲ್ಲಿ ಕವಿ ಜಗತ್ತಿನಾದ್ಯಾಂತ ಗಬ್ಬುವಾಸನೆ ಬರುತ್ತದೆ ಎಂದು ಹೇಳುತ್ತಾರೆ. ಅಂದರೆ ಅದನ್ನು ಬ್ರಷ್ಟಾಚಾರ, ಮೋಸ, ವಂಚನೆ, ಕರ್ತವ್ಯಲೋಪ, ಲಂಚಗುಳಿತನ ಮುಂತಾದವು ಎಂದು ಬಾವಿಸೋಣ. ಇಲ್ಲಿ ಕವಿ ಗಬ್ಬುವಾಸನೆಯ ಹೊರ ನಿಂತು ಮಾತನಾಡುತ್ತಿದ್ದಾರೆ. ಅಂದರೆ ಪ್ರೊ. ಸಬರದ ಅವರನ್ನು ತುಂಬಾ ಹತ್ತಿರದಿಂದ ನೋಡಿದ ವಿದ್ಯಾರ್ಥಿಗಳ ಅಂಭೋಣವೆಂದರೆ, ಸಬರದ್ ಸಾರೇ ಗಬ್ಬು ವಾಸನೆ ಹೊಡೆಯುತ್ತಿರುವಾಗ ಜಗತ್ತಿನ ಗಬ್ಬು ವಾಸನೆ ಬಗ್ಗೆ ಬರೆಯಲು ಇವರಿಗೆ ನೈತಿಕ ಹಕ್ಕಾದರೂ ಏನಿದೆ ಅನ್ನುವುದು ಅವರ ವಾದ. ಅಂದರೆ, ಪಿಹೆಚ್.ಡಿ ಮಾಡಲು ಬರುವ ವಿದ್ಯಾರ್ಥಿಗಳಿಗೆ ಬರುವ ಸ್ಕಾಲಶಿಪ್ ನಲ್ಲೂ ಪಾಲು ಕೇಳುವ ಸಬರದ್ ಇನ್ನು ಯಾವ ಬ್ರಷ್ಟಾಚಾರಿಗಿಂತ ಕಡಿಮೆ ಹೇಳಿ? ಒಮ್ಮೆ ಅಥಿತಿ ಉಪನ್ಯಾಸಕರ ಆಯ್ಕೆಗೆ ೨೫ ಸಾವಿರ ಕೇಳಿದ್ದಾರೆ, ಇದನ್ನು ಮೊಬೈಲಿನಲ್ಲಿ ರೆಕಾರ್ಡ ಮಾಡಿದ ಅತಿಥಿ ಉಪನ್ಯಾಸಕ ಹುದ್ದೆಗೆ ಸ್ಪರ್ಧಿಸಿದ ಸ್ಪರ್ಧಾಳು ಇದನ್ನು ಇಟ್ಟುಕೊಂಡು ಮಾದ್ಯಮಗಳ ಮುಂದೆ ಹೋಗುವುದಾಗಿ ಹೆದರಿಕೆ ಹಾಕಿದ್ದಾರೆ. ಆಗ ಸಬರದ ಹೆದರಿ `ಲ್ಲ ಮಾರಾಯ್ರ ಹಂಗ ಮಾಡಬ್ಯಾಡ್ರಿ..ನಿಮ್ಮನ್ನು ಪುಗಸಟ್ಟೆ ಆಯ್ಕೆ ಮಾಡ್ತೀನಿ..ನೀವು ಹಂಗೇನಾರಾ ಮಾಡಿದ್ರ ಶಾಸ್ತ್ರೀಯ ಭಾಷೆಯ ಯೋಜನೆಗೆ ಒಂದು ಕೋಟಿ ಬರೋದಿದೆ ಅದು ತಪ್ಪಿ ಹೋಕ್ಕಾತಿ' ಅಂದರಂತೆ. ಈಗ ಆ ಒಂದು ಕೋಟಿಯನ್ನೂ ಗುಳುಂ ಅನ್ನಿಸಿರುವುದು ಹೊಸ ಸುದ್ದಿಯೇನಲ್ಲ. ಹೀಗೆ ಹುಡುಕುತ್ತಾ ಹೋದರೆ ಸಬರದ ಸಾಹೇಬರ ನೀಚತನದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇನ್ನು ಇವರ ಪುಸ್ತಕಗಳನ್ನು ಹಿಡಿದು ಎಲ್ಲೆಲ್ಲಿ ಕದ್ದಿದ್ದಾರೆಂದು ಲೆಕ್ಕ ಹಾಕುತ್ತಾ ಕುಳಿತರೆ ಒಂದು ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಇನ್ನು ಇವರು ಕೈಗೊಂಡ ಯೋಜನೆಗಳ ಬಗ್ಗೆ ಯಾರಾದರೂ ಮಾಹಿತಿ ಹಕ್ಕಿನ ಕಾನೂನಿನಡಿ ಮಾಹಿತಿ ಕೇಳಿದರೆ ಸಬರದರ ನಿಜ ಬಣ್ಣ ಬಯಲಾಗುವುದರಲ್ಲಿ ಸಂಶಯವಿಲ್ಲ. ಇಂತಹ ಬ್ರಷ್ಟ ಪ್ರೊಫೆಸರುಗಳು ಹೆಗ್ಗಣದಂತೆ ವಿಶ್ವವಿದ್ಯಾಲಯಗಳನ್ನು ಮುಕ್ಕುತ್ತಿದ್ದಾರೆ.ಇದರ ನಿಯಂತ್ರಣ ಯಾವಾಗ? ಇಲ್ಲಿನ ವಿಧ್ಯಾರ್ಥಿಗಳೇಕೆ ಇದನ್ನೆಲ್ಲಾ ನೋಡಿ ಸುಮ್ಮನಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.

ಇದನ್ನೆಲ್ಲಾ ನೋಡಿದರೆ, ಬಸವರಾಜ ಸಬರದರೇ ಗಬ್ಬು ವಾಸನೆ ಬರುವಾಗ ಜಗತ್ತಿನ ಗಬ್ಬು ವಾಸನೆ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕ ಹಕ್ಕಿದೆ? ನೀವೇ ಹೇಳಿ..
ಸ್ನೇಹಿತ ಸ್ನೇಹಿತಿಯರೇ ಇಂತಹದ್ದೇ ಸ್ಪೋಟಕ ಸಿದ್ದಿಗಳೊಂದಿಗೆ ಇನ್ನಷ್ಟು ಅಧ್ಯಾಪಕರ ಬಣ್ಣವನ್ನು ಬಯಲು ಮಾಡಲು ವಿಶ್ವವಿದ್ಯಾಲಯಗಳ ದಿನಚರಿ ಬದ್ದವಾಗಿದೆ. ಮುಂದಿನ ಬರಹಗಳಿಗಾಗಿ ಕಾಯುತ್ತಿರಿ.
ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ: ಸಂಪರ್ಕಕ್ಕೆ: visvavidyalayagaladinachari@gmail.com

2 comments:

Anonymous said...

asavaraja Halli ಒಂದು ಬಾರಿ ಸಬರದ ಅವರನ್ನು ರಾಯಚೂರಿನಲ್ಲಿ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ನೋಡಿದ್ದೆ. ಆ ಕಥಾಸಂಕಲನದ ಬಗ್ಗೆ ಉಪನ್ಯಾಸ ನೀಡಲು ಬಂದಿದ್ದ ಅವರು ಎಳ್ಳಷ್ಟು ಓದದೆ ಅಲ್ಲಲ್ಲಿ ನಾಲ್ಕಾರು ವಾಕ್ಯಗಳನ್ನು ಮೆನ್ಸನ್ ಮಾಡಿ ಹೊರ ನಡೆದಿದ್ದರು. ನಮ್ಮೊಂದಿಗೆ ಊಟ ಮಾಡವಾಗಲು ಆಡಿದ ಮಾತಿನ ಪರಿ ಮನುಷ್ಯ ಆ ಥರ ಎನ್ನೋದ ಗೊತ್ತಾಗಿತ್ತು. ಯಾವ ಹುತ್ತಿನ ಯಾವ ಹಾವಿರುತ್ತೋ..! ಮುಖವಾಡದ ಮನುಷ್ಯರು. ಗಬ್ಬು ವಾಸನೆ ಬೀರದಿರುತ್ತಾರೆಯೇ ?
-ಬಸವ ಹಳ್ಳಿ,

Anonymous said...

Revaiah Odeyar
ಈಗ ಗುಲಬರ್ಗಾ ವಿ ವಿ ಅಲ್ಲದೆ ವಿಜಾಪುರ ಮಹಿಳಾ ವಿ ವಿ ಯಲ್ಲೂ ಗಬ್ಬು ವಾಸನೆ ಇದೆಯಂತೆ, ಹೌದೆ? ವಿ ವಿಯ ದಿನಚರಿಯಲ್ಲಿ ದೆಯೇ?