ಸುದೇಶ ದೊಡ್ಡಪಾಳ್ಯ, ಮೈಸೂರು
ಶತಮಾನದ ಹೊಸ್ತಿಲಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯ ಮಾರ್ಚ್ ತಿಂಗಳಲ್ಲಿ ಮಾಡಿದ್ದ ದೊಡ್ಡ ಸುದ್ದಿ ಶೈಕ್ಷಣಿಕ ಇಲ್ಲವೇ ಮಹತ್ವದ ಸಾಧನೆಯ ಕಾರಣಕ್ಕಾಗಿ ಆಗಿರಲಿಲ್ಲ. ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರೊಬ್ಬರು ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಆಕೆ ಆತ್ಮಹತ್ಯೆಗೆ ಯತ್ನಿಸಿದ್ದರಿಂದ.
ಆರೋಪಿ ಪ್ರಾಧ್ಯಾಪಕ ಪದೇ ಪದೇ `ನನಗೆ ಏನೂ ಕೊಡಲ್ವಾ? ಪಾರ್ಟಿ ಕೊಡಿಸಲ್ವಾ?~ ಎಂದು ಪೀಡಿಸುತ್ತಲೇ ಇದ್ದ. `ಆಯ್ತು, ನನ್ನ ಪತಿ ಬರಲಿ, ಒಟ್ಟಿಗೆ ಹೋಗೋಣ~ ಎಂದು ವಿದ್ಯಾರ್ಥಿನಿ ಹೇಳಿದಾಗ, `ಅಂಥ ಪಾರ್ಟಿ ಬೇಡ, ನಾನು, ನೀನು ಇಬ್ಬರೇ ಇರುವ ಪಾರ್ಟಿ ಬೇಕು~ ಎನ್ನುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಒಮ್ಮೆ ಏಕಾಏಕಿ ವಿದ್ಯಾರ್ಥಿನಿ ಮನೆಗೆ ಹೋಗಿ ಅಸಭ್ಯವಾಗಿ ವರ್ತಿಸಿದ. ಈ ಕುರಿತು ಕುಲಪತಿಗೆ ದೂರು ನೀಡಿದಾಗ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿ ದೀರ್ಘಪತ್ರವನ್ನು ಬರೆದಿಟ್ಟು ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಕೂಡಲೇ ವಿಶ್ವವಿದ್ಯಾನಿಲಯ ಎಚ್ಚೆತ್ತುಕೊಂಡು ಪ್ರಾಧ್ಯಾಪಕನನ್ನು ಅಮಾತನುಗೊಳಿಸಿ ಈ ಕುರಿತು ವಿಚಾರಣೆಯನ್ನು ವಿಶ್ವವಿದ್ಯಾನಿಲಯದ `ಮಹಿಳಾ ದೌರ್ಜನ್ಯ ದೂರು ಸಮಿತಿ~ಗೆ ವಹಿಸಿತು. ವಾರದ ಹಿಂದೆಯಷ್ಟೆ ಮಹಿಳಾ ದೌರ್ಜನ್ಯ ದೂರು ಸಮಿತಿ ವಿವಿಗೆ ಅಂತಿಮ ವರದಿಯನ್ನು ಸಲ್ಲಿಸಿದೆ. ಕಳೆದ ಆರು ವರ್ಷಗಳಿಂದ ಈ ಸಮಿತಿ ಅಸ್ತಿತ್ವದಲ್ಲಿದ್ದು, ಇಲ್ಲಿಯವರೆಗೆ 26 ದೂರುಗಳನ್ನು ದಾಖಲಿಸಿಕೊಂಡಿದೆ. ಆದರೆ ಯಾವ ಪ್ರಕರಣದಲ್ಲಿಯೂ ಶಿಕ್ಷೆಯಾಗಿಲ್ಲ.
ವರ್ಷದ ಹಿಂದೆ ನಗರದ ಪ್ರತಿಷ್ಠಿತ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರಯೋಗಾಲಯದಲ್ಲಿ ವಿದೇಶಿ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ. ಆಕೆ ಸಮಿತಿಗೆ ಲಿಖಿತ ದೂರು ನೀಡಿದಳು. ಪ್ರಾಧ್ಯಾಪಕ ಅಸಭ್ಯವಾಗಿ ವರ್ತಿಸಿರುವುದು ಸತ್ಯ ಎನ್ನುವುದು ವಿಚಾರಣೆಯಿಂದ ಸಾಬೀತಾಗಿ ಆತನಿಗೆ ಎಚ್ಚರಿಕೆ ನೀಡಲಾಯಿತಷ್ಟೆ.
ಒಳ ರಾಜಕೀಯ: ಈಗ ಸಮಿತಿಯಲ್ಲಿ ದಾಖಲಾಗಿರುವ ಎಲ್ಲ ದೂರುಗಳು ಸಾಚಾ ಎನ್ನುವಂತಿಲ್ಲ. ಏಕೆಂದರೆ ಅರ್ಧದಷ್ಟು ದೂರುಗಳು ಆಯಾ ಅಧ್ಯಯನ ವಿಭಾಗದ ಒಳ ರಾಜಕೀಯದ ಫಲವಾಗಿರುತ್ತವೆ. `ಆರು ವರ್ಷಗಳಿಂದ ಮಹಿಳಾ ದೌರ್ಜನ್ಯ ದೂರು ಸಮಿತಿ ಕೆಲಸ ಮಾಡುತ್ತಿದೆ. ಸಮಿತಿ ವಿವಿಗೆ ವರದಿಕೊಡಬಹುದೇ ಹೊರತು ಶಿಕ್ಷೆಯನ್ನಲ್ಲ~ ಎನ್ನುತ್ತಾರೆ ಸಮಿತಿಯ ಅಧ್ಯಕ್ಷೆ ಡಾ.ಕೆ.ಯಶೋದರ. ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 162 ಕಾಲೇಜುಗಳಿವೆ. ಇಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಶೇಕಡ 56ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಆದರೆ 2005 ರ ವರೆಗೆ ಇಲ್ಲಿ ಮಹಿಳಾ ದೌರ್ಜನ್ಯ ಕುರಿತ ಸಮಿತಿಯೇ ರಚನೆ ಇರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸಮಿತಿಯನ್ನು ರಚಿಸಲಾಗಿದೆ. ಮೊದಲ ಬಾರಿಗೆ ಪ್ರೊ.ಚ.ಸರ್ವಮಂಗಳ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ 18, ಡಾ.ಕೆ.ಯಶೋದರ ಅವಧಿಯಲ್ಲಿ 8- ಹೀಗೆ ಒಟ್ಟು 26 ದೂರುಗಳು ದಾಖಲಾಗಿವೆ

No comments:
Post a Comment