- ಪ್ರೊ. ಪಿ. ವೆಂಕಟರಾಮಯ್ಯ June 18, 2011 prajavani
ಗುರುಗಳು ದೇವರಿಗೆ ಸಮಾನ ಎಂದು ನಂಬಿಕೊಂಡು ಬಂದ ಪರಂಪರೆ ನಮ್ಮದು. ಗುರು ಮತ್ತು ಶಿಷ್ಯರ ಸಂಬಂಧ ಅಷ್ಟು ಪವಿತ್ರವಾದುದು. ಶಿಕ್ಷಣ ಕ್ಷೇತ್ರದಲ್ಲಿನ ಇಂತಹ ಉನ್ನತ ಪರಂಪರೆಯನ್ನು ಎತ್ತಿ ಹಿಡಿಯಬೇಕಾಗಿರುವುದು ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು. ಆದರೆ ಅಲ್ಲಿ ನಡೆಯುತ್ತಿರುವುದು ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆ. ಶೈಕ್ಷಣಿಕ ಸಾಧನೆಯ ಮೂಲಕ ಪ್ರಚಾರದಲ್ಲಿರಬೇಕಾದ ವಿಶ್ವವಿದ್ಯಾಲಯಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದಾಗಿ ಜನರಲ್ಲಿ ಹೇಸಿಗೆ ಹುಟ್ಟಿಸುತ್ತಿವೆ. ಸಮಾಜಕ್ಕೆ ಆದರ್ಶರಾಗಿ ಇರಬೇಕಾಗಿರುವ ಪ್ರಾದ್ಯಾಪಕರು ಅಪರಾಧಿಗಳ ಸಾಲಲ್ಲಿ ನಿಂತಿದ್ದಾರೆ. ಇದು ಇಡೀ ಗುರುಸಮೂಹ ಆತ್ಮಾವಲೋಕನ ನಡೆಸಬೇಕಾದ ಬೆಳವಣಿಗೆ.ಪಂಡಿತ ಜವಹರಲಾಲ್ ನೆಹರೂ ಪ್ರಕಾರ ವಿಶ್ವವಿದ್ಯಾಲಯಗಳು ಮಾನವತೆಗೆ, ಸಹನೆಗೆ, ತರ್ಕಕ್ಕೆ, ಅಭಿವೃದ್ಧಿಗೆ, ಹೊಸ ಚಿಂತನೆಗಳನ್ನು ಹುಟ್ಟುಹಾಕುವ ಸಾಹಸಕ್ಕೆ ಮತ್ತು ಸತ್ಯಾನ್ವೇಷಣೆಗಳಿಗೆ ಮೀಸಲಾಗಿರುವ ಕೇಂದ್ರಗಳು. ಸ್ವಾತಂತ್ರ್ಯಾನಂತರ ದೇಶದಲ್ಲಿ ಇಂತಹ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆ ಮೂಲಕ ಜನತೆಯಲ್ಲಿ ಉನ್ನತ ಶಿಕ್ಷಣ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಅನೇಕ ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿವೆ. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಜೊತೆಗೆ ಕಾಲೇಜುಗಳ ಸಂಖ್ಯೆಯೂ ಹೆಚ್ಚುತ್ತಲಿದೆ. ಸ್ವಾತಂತ್ರ್ಯ ಬಂದ ತರುಣದಲ್ಲಿ ಸುಮಾರು 70 ವಿಶ್ವವಿದ್ಯಾಲಯಗಳು ಮತ್ತು ಸುಮಾರು 3000 ಕಾಲೇಜುಗಳು ಇದ್ದ ಸ್ಥಿತಿಯಿಂದ ಇಂದು ಸುಮಾರು 400 ವಿಶ್ವವಿದ್ಯಾಲಯಗಳು ಮತ್ತು 20,000ಕ್ಕೂ ಮಿಗಿಲಾದ ಕಾಲೇಜುಗಳಿರುವ ಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾರಣದಿಂದ ಸಮಾಜದಲ್ಲಿ, ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಮೊಟ್ಟ ಮೊದಲ ಪೀಳಿಗೆ ಉನ್ನತ ಶಿಕ್ಷಣ ಪಡೆಯುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಮತ್ತೊಂದು ಆರೋಗ್ಯಕರ ಬದಲಾವಣೆಯೆಂದರೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು. ಅಷ್ಟೇ ಅಲ್ಲ, ಶಿಕ್ಷಣಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ಸಾಧನೆ ಮತ್ತು ಪ್ರತಿಭೆ ಪ್ರಂಶಸನೀಯ ಮಟ್ಟದಲ್ಲೂ ಇದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಹೆಣ್ಣಿಗೆ ಎಲ್ಲ ಕ್ಷೇತ್ರಗಳಲ್ಲಿ ಗಂಡಿಗೆ ಸಮನಾಗಿ ದುಡಿಯುವ ಸಾಮರ್ಥ್ಯ ಒದಗಿ ಬಂದಿರುವುದರಲ್ಲಿ ಆಶ್ಚರ್ಯವಿಲ್ಲ.
ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳು ಸಮರ್ಥವಾಗಿ ನಡೆಯುತ್ತಿವೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಪ್ರತಿಭಾನ್ವಿತ ಮಾನವ ಸಂಪನ್ಮೂಲ ಒದಗಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳ ಜೊತೆಗೆ ಸಮಾನ ಮಟ್ಟದಲ್ಲಿ ನಿಲ್ಲುವ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡುವ ಹೊಣೆಗಾರಿಕೆಯು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಮೇಲಿದೆ.
ಸಂಶೋಧನಾ ಕ್ಷೇತ್ರದಲ್ಲಿ 70-80 ರ ದಶಕಗಳ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗ ನಮ್ಮ ವಿಶ್ವವಿದ್ಯಾಲಯಗಳಿಗೆ ಸಂಶೋಧನೆಗೆ ಬರುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಅವಕಾಶಗಳ ಜೊತೆಗೆ ಜಾಗತಿಕ ಮಟ್ಟದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಳಿಸುತ್ತಿರುವ ಸಾಧನೆಗಳೂ ಕೂಡ ನಮ್ಮ ವಿದ್ಯಾರ್ಥಿನಿಯರಿಗೆ ಪ್ರೇರಕವಾಗಿವೆ.
ಇತ್ತೀಚಿನ ವರ್ಷಗಳಲ್ಲಿ ನೊಬೆಲ್ ಮತ್ತಿತರ ಪಾರಿತೋಷಕ ಪಡೆಯುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಲಿದೆ. ಇದು ಸಾಹಿತ್ಯ, ಸಾಮಾಜಿಕ, ವಿಜ್ಞಾನ, ರಾಜಕೀಯ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುವ ಸಂಗತಿ. ಅಂತರ ರಾಷ್ಟೀಯ ಮಟ್ಟದಲ್ಲಿ ಕಂಡು ಬರುತ್ತಿರುವ ಮಹಿಳೆಯರ ಸಾಧನೆಗಳು ನಮ್ಮ ವಿದ್ಯಾರ್ಥಿನಿಯರಿಗೆ ಪ್ರೇರೇಪಣಾ ಪ್ರೋತ್ಸಾಹ ನೀಡುತ್ತಿದ್ದರೆ ಆಶ್ಚರ್ಯವಿಲ್ಲ.
ಸಂಶೋಧನೆ ಮೂಲಕ ಹೊಸ ಚಿಂತನೆ, ಆವಿಷ್ಕಾರ ಮಾಡುವ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದು ಉತ್ತಮ ಬೆಳವಣಿಗೆ. ದುರದೃಷ್ಟವಶಾತ್ ವಿಶ್ವವಿದ್ಯಾಲಯಗಳಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಕೆಲವು ಲೈಂಗಿಕ ಹಗರಣಗಳಿಂದ ಇಡೀ ವಿಶ್ವವಿದ್ಯಾಲಯ ವ್ಯವಸ್ಥೆಯೇ ಕ್ಷೋಭೆಗೊಂಡಿದೆಯೋ ಎಂಬ ಭಾವನೆ ಸಮಾಜದಲ್ಲಿ ಬಿಂಬಿತವಾಗುತ್ತಿದೆ. ಇದು ದುರದೃಷ್ಟಕರ. ಪ್ರತಿಯೊಬ್ಬ ಮಾನವನಲ್ಲಿಯೂ ಗಂಡು ಹೆಣ್ಣು ಒಳಗೊಂಡು, ಅರಿಷಡ್ವರ್ಗಗಳಿವೆ. ಈ ಅರಿಷಡ್ವರ್ಗಗಳಲ್ಲಿ ಮೋಹ ಮತ್ತು ಕಾಮ ಉಂಟು ಮಾಡುವ ಅನಾಹುತಗಳನ್ನು ಸರಿಪಡಿಸುವುದು ಕಷ್ಟ.
ಲೈಂಗಿಕ ಆಕರ್ಷಣೆಗೆ ಒಳಪಡುವುದು ಪುರುಷನ ಪ್ರಬಲ ದೌರ್ಬಲ್ಯ. ಇದು ಒಬ್ಬ ರಾಷ್ಟ್ರಾಧ್ಯಕ್ಷ, ಒಬ್ಬ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಅಧ್ಯಕ್ಷ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯಾರನ್ನೂ ಬಿಡುವುದಿಲ್ಲ. ಉನ್ನತ ಅಧಿಕಾರದಲ್ಲಿರುವವರು ಗಾಜಿನ ಮನೆಯಲ್ಲಿದ್ದಂತೆ. ಅವರು ಮಾಡುವ ಪ್ರತಿ ಕೆಲಸವನ್ನೂ ಹೊರ ಪ್ರಪಂಚ ಗಮನಿಸುತ್ತಿರುತ್ತದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿರುವವರ ಬಗ್ಗೆ ಅನೇಕ ನಿರೀಕ್ಷೆಗಳನ್ನು ಸಮಾಜ ಇಟ್ಟುಕೊಂಡಿರುತ್ತದೆ. ಈ ನಿರೀಕ್ಷೆ ಹುಸಿಮಾಡುವ ಘಟನೆಯನ್ನು ಸಮಾಜ ಗಂಭೀರವಾಗಿ ಪರಿಗಣಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಗೋಚರಿಸುತ್ತಿರುವ ಲೈಂಗಿಕ ಹಗರಣಗಳು ಹಿಂದಿನ ದಿನಗಳಲ್ಲಿ ಇರುತ್ತಿರಲಿಲ್ಲವೆಂದೇನೂ ಹೇಳಲಾಗದು. ಇಂತಹ ಘಟನೆಗಳು ಅಗೋಚರವಾಗಿ ಮುಚ್ಚಿಹೋಗುತ್ತಿದ್ದವು. ಪ್ರಾಯಶಃ, ಅತ್ಯಂತ ಕ್ರಿಯಾಶೀಲವಾಗಿರುವ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಜೊತೆಗೆ ದೇಶದಲ್ಲಿ ಮಹಿಳಾಪರವಾದ ಕಾನೂನುಗಳ ಜಾರಿಯ ಕಾರಣ ಸಣ್ಣ ಪುಟ್ಟ ಘಟನೆಗಳೂ ಕೂಡ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿವೆ. ಭಾರತೀಯ ಸಮಾಜದಲ್ಲಿ ಸ್ತ್ರೀಯರು ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಆಗಲಿ ಅಥವಾ ತಮ್ಮ ಲೈಂಗಿಕ ಪಾವಿತ್ರ್ಯತೆ ಹರಣವಾಗುವ ವಿಷಯವನ್ನಾಗಲಿ ತಮ್ಮ ವೈಯಕ್ತಿಕ ಗೌರವದ ದೃಷ್ಟಿಯಿಂದ ಸಾರ್ವಜನಿಕಗೊಳಿಸಲು ಹಿಂದೇಟು ಹಾಕುವ ಸಂಭವವೇ ಹೆಚ್ಚು. ಆದಾಗ್ಯೂ, ಅದು ಸಾರ್ವಜನಿಕವಾದರೆ ವಿಷಯ ಗಂಭೀರವಾಗಿರಲೇಬೇಕು. ಅಂತಹ ಘಟನೆಯನ್ನು ಖಂಡಿಸಲೇಬೇಕು. ಆದಾಗ್ಯೂ ಮಹಿಳಾ ಪರ ಕಾನೂನಿನ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುವಂತೆಯೂ ಇಲ್ಲ.
ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿದ್ಯಾರ್ಥಿನಿಗೂ ಮಾರ್ಗದರ್ಶಕರಿಗೂ ಅತ್ಯಂತ ನಿಕಟ ಸಂಪರ್ಕವಿರುತ್ತದೆ. ಅದರಲ್ಲೂ ಪ್ರಯೋಗಶಾಲೆ ಆಧರಿತ ಸಂಶೋಧನೆಯೆಂದ ಮೇಲೆ ಅನೇಕ ಬಾರಿ ವಿದ್ಯಾರ್ಥಿನಿ ಮತ್ತು ಮಾರ್ಗದರ್ಶಕರು ಒಟ್ಟಿಗೆ ಇರುವ ಸಂದರ್ಭಗಳು ಬರುತ್ತಲೇ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಪುರುಷ ಮಾರ್ಗದರ್ಶಕನು ಸಂಶೋಧನಾ ವಿದ್ಯಾರ್ಥಿನಿ ಜೊತೆ ಕೆಲಸಮಾಡುವಾಗ ತನ್ನ ಅರಿಷಡ್ವರ್ಗಗಳಲ್ಲಿ ಮೋಹ ಮತ್ತು ಕಾಮಗಳನ್ನು ನಿಗ್ರಹಿಸುವ ಅಥವಾ ಹತೋಟಿಯಲ್ಲಿಟ್ಟುಕೊಳ್ಳಬೇಕಾದ ಮಾನಸಿಕ ದೃಢತೆ ರೂಢಿಸಿಕೊಳ್ಳಬೇಕು.
ಇದಾಗದಿದ್ದಲ್ಲಿ ತನ್ನ ಪ್ರಯೋಗಾಲಯದಲ್ಲಿ ಸಂಶೋಧನೆಗೆ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಕೂಡದು. ಆ ರೀತಿ ಆಗದಿದ್ದಲ್ಲಿ ತನ್ನ ವ್ಯಕ್ತಿತ್ವ ಎಷ್ಟರ ಮಟ್ಟಿಗೆ ಹರಾಜಾಗಬಹುದೆಂಬ ಪರಿಕಲ್ಪನೆ ಆತನಿಗೆ ಚೆನ್ನಾಗಿರಬೇಕು. ಅಷ್ಟೇ ಅಲ್ಲ, ಆತ ಆ ಸಮಸ್ಯೆಯಿಂದ ಹೊರ ಬಂದರೂ ಮುಂದಿನ ವಿದ್ಯಾರ್ಥಿ ಪೀಳಿಗೆ ಆ ವ್ಯಕ್ತಿಯನ್ನು ನೋಡುವ ದೃಷ್ಟಿಯೇ ಆತನಿಗೆ ಸತತವಾಗಿ ನೀಡುವ ಶಿಕ್ಷೆಯಾಗುವುದರಲ್ಲಿ ಸಂದೇಹವಿಲ್ಲ. ಈ ಪರಿಸ್ಥಿತಿ ನಮ್ಮ ಪ್ರಾಧ್ಯಾಪಕರಿಗೆ ಅಥವಾ ಸಂಶೋಧನಾ ಮಾರ್ಗದರ್ಶಕರಿಗೆ ಬೇಕೆ?
ವಿಶ್ವವಿದ್ಯಾಲಯದಲ್ಲಿ ಜರುಗಿರಬಹುದೆನ್ನುವ ಇಂತಹ ಘಟನೆಗಳು ಪ್ರಚಾರಗೊಂಡಾಗ ಕ್ಷೇತ್ರದಲ್ಲಿರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿರಬೇಕು.
ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕ್ಷೇತ್ರದ ಪರಿಚಯ ಮಾಡುವ ವಿಧಾನದಂತೆ ಮಾರ್ಗದರ್ಶಕರಿಗೆ ಸಂಶೋಧನಾ ಅಭ್ಯರ್ಥಿಗಳೊಡನೆ ಇಟ್ಟುಕೊಳ್ಳಬೇಕಾದ ಸಂಬಂಧಗಳ ಬಗ್ಗೆ ಮಾರ್ಗಸೂಚಿ ಕೊಡಲಾಗುವುದಿಲ್ಲ. ಇದು ವೈಯಕ್ತಿಕ ಜೀವನದ ಮೌಲ್ಯಗಳಿಗೆ ಸಂಬಂಧಿಸಿದ ಸಂಗತಿ. ಶಿಕ್ಷಣ ಕ್ಷೇತ್ರವನ್ನು ಯಾರಾದರೂ ಆಯ್ಕೆ ಮಾಡಿಕೊಂಡಾಗ ಅದಕ್ಕೆ ಸಂಬಂಧಿಸಿದ ಮೌಲ್ಯಗಳನ್ನು ಅವರು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಮೌಲ್ಯಾಧರಿತ ಜೀವನ ನಡೆಸದಿದ್ದರೆ ವ್ಯಕ್ತಿಯು ತನ್ನ ಅವನತಿ ಕಾಣುವುದರ ಜೊತೆಗೆ ವ್ಯವಸ್ಥೆಯ ಅವನತಿಗೂ ಕಾರಣನಾಗುತ್ತಾನೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರುವ ಒಟ್ಟು ಸಂಶೋಧನಾ ವಿದ್ಯಾರ್ಥಿನಿಯರ ಸಂಖ್ಯೆಗೆ ಹೋಲಿಸಿದರೆ ಹಗರಣಗಳ ಶೇಕಡಾ ಪ್ರಮಾಣ ಅತ್ಯಂತ ಕಡಿಮೆ ಇರಬಹುದು. ಆದರೆ ಹಗರಣಗಳೇ ಇಲ್ಲದ ಗುರಿ ನಮ್ಮದಾಗಿರಬೇಕು. ಆ ರೀತಿ ಆದಾಗಲೇ ನಮ್ಮ ವಿಶ್ವವಿದ್ಯಾಲಯಗಳು ಆದರ್ಶ ಕಲಿಕಾ ಕೇಂದ್ರಗಳಾಗಲು ಸಾಧ್ಯ.
ಪಂಡಿತ ಜವಹರಲಾಲ್ ನೆಹರೂ ಪ್ರಕಾರ ವಿಶ್ವವಿದ್ಯಾಲಯಗಳು ಮಾನವತೆಗೆ, ಸಹನೆಗೆ, ತರ್ಕಕ್ಕೆ, ಅಭಿವೃದ್ಧಿಗೆ, ಹೊಸ ಚಿಂತನೆಗಳನ್ನು ಹುಟ್ಟುಹಾಕುವ ಸಾಹಸಕ್ಕೆ ಮತ್ತು ಸತ್ಯಾನ್ವೇಷಣೆಗಳಿಗೆ ಮೀಸಲಾಗಿರುವ ಕೇಂದ್ರಗಳು. ಸ್ವಾತಂತ್ರ್ಯಾನಂತರ ದೇಶದಲ್ಲಿ ಇಂತಹ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆ ಮೂಲಕ ಜನತೆಯಲ್ಲಿ ಉನ್ನತ ಶಿಕ್ಷಣ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಅನೇಕ ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿವೆ. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಜೊತೆಗೆ ಕಾಲೇಜುಗಳ ಸಂಖ್ಯೆಯೂ ಹೆಚ್ಚುತ್ತಲಿದೆ. ಸ್ವಾತಂತ್ರ್ಯ ಬಂದ ತರುಣದಲ್ಲಿ ಸುಮಾರು 70 ವಿಶ್ವವಿದ್ಯಾಲಯಗಳು ಮತ್ತು ಸುಮಾರು 3000 ಕಾಲೇಜುಗಳು ಇದ್ದ ಸ್ಥಿತಿಯಿಂದ ಇಂದು ಸುಮಾರು 400 ವಿಶ್ವವಿದ್ಯಾಲಯಗಳು ಮತ್ತು 20,000ಕ್ಕೂ ಮಿಗಿಲಾದ ಕಾಲೇಜುಗಳಿರುವ ಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾರಣದಿಂದ ಸಮಾಜದಲ್ಲಿ, ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಮೊಟ್ಟ ಮೊದಲ ಪೀಳಿಗೆ ಉನ್ನತ ಶಿಕ್ಷಣ ಪಡೆಯುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ.

ವಿಶ್ವವಿದ್ಯಾಲಯದಲ್ಲಿ ಜರುಗಿರಬಹುದೆನ್ನುವ ಇಂತಹ ಘಟನೆಗಳು ಪ್ರಚಾರಗೊಂಡಾಗ ಕ್ಷೇತ್ರದಲ್ಲಿರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿರಬೇಕು. ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕ್ಷೇತ್ರದ ಪರಿಚಯ ಮಾಡುವ ವಿಧಾನದಂತೆ ಮಾರ್ಗದರ್ಶಕರಿಗೆ ಸಂಶೋಧನಾ ಅಭ್ಯರ್ಥಿಗಳೊಡನೆ ಇಟ್ಟುಕೊಳ್ಳಬೇಕಾದ ಸಂಬಂಧಗಳ ಬಗ್ಗೆ ಮಾರ್ಗಸೂಚಿ ಕೊಡಲಾಗುವುದಿಲ್ಲ. ಇದು ವೈಯಕ್ತಿಕ ಜೀವನದ ಮೌಲ್ಯಗಳಿಗೆ ಸಂಬಂಧಿಸಿದ ಸಂಗತಿ. ಶಿಕ್ಷಣ ಕ್ಷೇತ್ರವನ್ನು ಯಾರಾದರೂ ಆಯ್ಕೆ ಮಾಡಿಕೊಂಡಾಗ ಅದಕ್ಕೆ ಸಂಬಂಧಿಸಿದ ಮೌಲ್ಯಗಳನ್ನು ಅವರು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಮೌಲ್ಯಾಧರಿತ ಜೀವನ ನಡೆಸದಿದ್ದರೆ ವ್ಯಕ್ತಿಯು ತನ್ನ ಅವನತಿ ಕಾಣುವುದರ ಜೊತೆಗೆ ವ್ಯವಸ್ಥೆಯ ಅವನತಿಗೂ ಕಾರಣನಾಗುತ್ತಾನೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರುವ ಒಟ್ಟು ಸಂಶೋಧನಾ ವಿದ್ಯಾರ್ಥಿನಿಯರ ಸಂಖ್ಯೆಗೆ ಹೋಲಿಸಿದರೆ ಹಗರಣಗಳ ಶೇಕಡಾ ಪ್ರಮಾಣ ಅತ್ಯಂತ ಕಡಿಮೆ ಇರಬಹುದು. ಆದರೆ ಹಗರಣಗಳೇ ಇಲ್ಲದ ಗುರಿ ನಮ್ಮದಾಗಿರಬೇಕು. ಆ ರೀತಿ ಆದಾಗಲೇ ನಮ್ಮ ವಿಶ್ವವಿದ್ಯಾಲಯಗಳು ಆದರ್ಶ ಕಲಿಕಾ ಕೇಂದ್ರಗಳಾಗಲು ಸಾಧ್ಯ.
(ಲೇಖಕರು ನಿವೃತ್ತ ಕುಲಪತಿಗಳು)

No comments:
Post a Comment