Wednesday, August 17, 2011

ಗಬ್ಬುವಾಸನೆ ಎಂಬ ಪದ್ಯವೂ..ಬಸವರಾಜ ಸಬರದ ಎಂಬ ಗಬ್ಬುವಾಸನೆಯೂ

ಸ್ನೇಹಿತರೆ, ೧೩ ಆಗಷ್ಟ ೨೦೧೧ ರಂದು ಬೆಂಗಳೂರಿನಲ್ಲಿ  ಕನ್ನಡ ಸಂಸ್ಕೃತಿ ಇಲಾಖೆಯು ಭಾಷಾ ಸಾಮರಸ್ಯ ದಿನವನ್ನಾಗಿ ಆಚರಿಸಿತು. ಇದನ್ನು ಯು.ಆರ್. ಅನಂತಮೂರ್ತಿಗಳು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಬಹುಬಾಷಾ ಕವಿಗೋಷ್ಠಿಯೂ ಇತ್ತು. ಈ ಕವಿಗೋಷ್ಠಿಯಲ್ಲಿ ತೆಲುಗು, ತಮಿಳು, ತುಳು, ಉರ್ದು, ಮಲಯಾಳಂ, ಕೊಂಕಣಿ, ಇಂಗ್ಲೀಷ್, ಕನ್ನಡ ಮುಂತಾದ ಭಾಷೆಯ ಕವಿಗಳು ಬಂದಿದ್ದರು.  ಈ ಕವಿಗೋಷ್ಠಿಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗದ ಪ್ರೊಫೆಸರ್ ಬಸವರಾಜ ಸಬರದ ಅವರು ಭಾಗವಹಿಸಿ ಕವನವನ್ನು ಆಕರ್ಶಕವಾಗಿ ವಾಚಿಸಿದರು. ಆ ಕವನದ ಹೆಸರು ` ಗಬ್ಬು ವಾಸನೆ' ಎನ್ನುವುದು.

ಈ ಪದ್ಯದ ಸಾರಾಂಶವೆಂದರೆ, ಬಜಾರು, ಮಠ, ಗುಡಿ, ಶಾಲೆ ಮುಂತಾದ ಯಾವುದೇ ಪ್ರದೇಶಕ್ಕೂ ಹೋದರೂ ಕವಿಗೆ ಗಬ್ಬು ವಾಸನೆ ಬಡಿಯುತ್ತದೆ. ಹೀಗೆ ಗಬ್ಬು ವಾಸನೆ ಬರುವುದನ್ನು ಇತರರಲ್ಲಿ ಕೇಳಿದರೆ, ಅದು ಮತ್ಯಾರಿಗೂ ಬರುವುದಿಲ್ಲ. ಹಾಗಾಗಿ ಎಲ್ಲರೂ ನಿನ್ನ ಮೂಗು ಕೆಟ್ಟಿರಬಹುದೆಂದು ಕವಿಯನ್ನು ಹಿಯಾಳಿಸುತ್ತಾರೆ. ಹಾಗಾಗಿ ಕವಿಗೆ ಗೊಂದಲ ಶುರುಚಾಗುತ್ತದೆ. ಗಬ್ಬು ವಾಸನೆ ನನಗೆ ಮಾತ್ರ ಬರುತ್ತಿದೆಯೋ ಜಗತ್ತಿನಾದ್ಯಾಂತ ಆವರಿಸಿರುವ ಗಬ್ಬು ವಾಸನೆ ಜನಕ್ಕೆ ಯಾಕೆ ತಾಕುತ್ತಿಲ್ಲ ಎಂದೆಲ್ಲಾ ಕವಿ ಜಿಜ್ಗಾಸೆ ಮಾಡುವಂತೆ ಕಾವ್ಯ ಮುಗಿಯುತ್ತದೆ. ಪದ್ಯ ಓದುತ್ತಿದ್ದಂತೆ ಇಡೀ ಸಭೆಯೂ ಗಬ್ಬು ವಾಸನೆ ಬಡಿಯುವ ಅನುಭವವಾಗುತ್ತದೆ.
ಇರಲಿ ಕಾವ್ಯ ಈ ಕಾಲದ ಸಂಗತಿಯನ್ನು ಆಧರಿಸಿ ಅಸಾಹಯಕ ಸ್ಥಿತಿಯಲ್ಲಿ ಹುಟ್ಟಿದೆ. ಕಾವ್ಯ ವಾಚ್ಯವಾಗಿದ್ದರೂ ಈ ಕಾಲವನ್ನು ನಿರೂಪಿಸುವ ರೂಪಕದಂತಿದೆ ಸರಿ. ಇದನ್ನು ಓದುತ್ತಿದ್ದರೆ ಮೊಗಳ್ಳಿ ಗಣೇಶ್ ಅವರ ಕಥೆ ಬುಗುರಿ ನೆನಪಾಗುತ್ತದೆ.

ಇಲ್ಲಿ ಕವಿ ಜಗತ್ತಿನಾದ್ಯಾಂತ ಗಬ್ಬುವಾಸನೆ ಬರುತ್ತದೆ ಎಂದು ಹೇಳುತ್ತಾರೆ. ಅಂದರೆ ಅದನ್ನು ಬ್ರಷ್ಟಾಚಾರ, ಮೋಸ, ವಂಚನೆ, ಕರ್ತವ್ಯಲೋಪ, ಲಂಚಗುಳಿತನ ಮುಂತಾದವು ಎಂದು ಬಾವಿಸೋಣ. ಇಲ್ಲಿ ಕವಿ ಗಬ್ಬುವಾಸನೆಯ ಹೊರ ನಿಂತು ಮಾತನಾಡುತ್ತಿದ್ದಾರೆ. ಅಂದರೆ ಪ್ರೊ. ಸಬರದ ಅವರನ್ನು ತುಂಬಾ ಹತ್ತಿರದಿಂದ ನೋಡಿದ ವಿದ್ಯಾರ್ಥಿಗಳ ಅಂಭೋಣವೆಂದರೆ, ಸಬರದ್ ಸಾರೇ ಗಬ್ಬು ವಾಸನೆ ಹೊಡೆಯುತ್ತಿರುವಾಗ ಜಗತ್ತಿನ ಗಬ್ಬು ವಾಸನೆ ಬಗ್ಗೆ ಬರೆಯಲು ಇವರಿಗೆ ನೈತಿಕ ಹಕ್ಕಾದರೂ ಏನಿದೆ ಅನ್ನುವುದು ಅವರ ವಾದ. ಅಂದರೆ, ಪಿಹೆಚ್.ಡಿ ಮಾಡಲು ಬರುವ ವಿದ್ಯಾರ್ಥಿಗಳಿಗೆ ಬರುವ ಸ್ಕಾಲಶಿಪ್ ನಲ್ಲೂ ಪಾಲು ಕೇಳುವ ಸಬರದ್ ಇನ್ನು ಯಾವ ಬ್ರಷ್ಟಾಚಾರಿಗಿಂತ ಕಡಿಮೆ ಹೇಳಿ? ಒಮ್ಮೆ ಅಥಿತಿ ಉಪನ್ಯಾಸಕರ ಆಯ್ಕೆಗೆ ೨೫ ಸಾವಿರ ಕೇಳಿದ್ದಾರೆ, ಇದನ್ನು ಮೊಬೈಲಿನಲ್ಲಿ ರೆಕಾರ್ಡ ಮಾಡಿದ ಅತಿಥಿ ಉಪನ್ಯಾಸಕ ಹುದ್ದೆಗೆ ಸ್ಪರ್ಧಿಸಿದ ಸ್ಪರ್ಧಾಳು ಇದನ್ನು ಇಟ್ಟುಕೊಂಡು ಮಾದ್ಯಮಗಳ ಮುಂದೆ ಹೋಗುವುದಾಗಿ ಹೆದರಿಕೆ ಹಾಕಿದ್ದಾರೆ. ಆಗ ಸಬರದ ಹೆದರಿ `ಲ್ಲ ಮಾರಾಯ್ರ ಹಂಗ ಮಾಡಬ್ಯಾಡ್ರಿ..ನಿಮ್ಮನ್ನು ಪುಗಸಟ್ಟೆ ಆಯ್ಕೆ ಮಾಡ್ತೀನಿ..ನೀವು ಹಂಗೇನಾರಾ ಮಾಡಿದ್ರ ಶಾಸ್ತ್ರೀಯ ಭಾಷೆಯ ಯೋಜನೆಗೆ ಒಂದು ಕೋಟಿ ಬರೋದಿದೆ ಅದು ತಪ್ಪಿ ಹೋಕ್ಕಾತಿ' ಅಂದರಂತೆ. ಈಗ ಆ ಒಂದು ಕೋಟಿಯನ್ನೂ ಗುಳುಂ ಅನ್ನಿಸಿರುವುದು ಹೊಸ ಸುದ್ದಿಯೇನಲ್ಲ. ಹೀಗೆ ಹುಡುಕುತ್ತಾ ಹೋದರೆ ಸಬರದ ಸಾಹೇಬರ ನೀಚತನದ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇನ್ನು ಇವರ ಪುಸ್ತಕಗಳನ್ನು ಹಿಡಿದು ಎಲ್ಲೆಲ್ಲಿ ಕದ್ದಿದ್ದಾರೆಂದು ಲೆಕ್ಕ ಹಾಕುತ್ತಾ ಕುಳಿತರೆ ಒಂದು ದೊಡ್ಡ ಪಟ್ಟಿಯೇ ತಯಾರಾಗುತ್ತದೆ. ಇನ್ನು ಇವರು ಕೈಗೊಂಡ ಯೋಜನೆಗಳ ಬಗ್ಗೆ ಯಾರಾದರೂ ಮಾಹಿತಿ ಹಕ್ಕಿನ ಕಾನೂನಿನಡಿ ಮಾಹಿತಿ ಕೇಳಿದರೆ ಸಬರದರ ನಿಜ ಬಣ್ಣ ಬಯಲಾಗುವುದರಲ್ಲಿ ಸಂಶಯವಿಲ್ಲ. ಇಂತಹ ಬ್ರಷ್ಟ ಪ್ರೊಫೆಸರುಗಳು ಹೆಗ್ಗಣದಂತೆ ವಿಶ್ವವಿದ್ಯಾಲಯಗಳನ್ನು ಮುಕ್ಕುತ್ತಿದ್ದಾರೆ.ಇದರ ನಿಯಂತ್ರಣ ಯಾವಾಗ? ಇಲ್ಲಿನ ವಿಧ್ಯಾರ್ಥಿಗಳೇಕೆ ಇದನ್ನೆಲ್ಲಾ ನೋಡಿ ಸುಮ್ಮನಿದ್ದಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.

ಇದನ್ನೆಲ್ಲಾ ನೋಡಿದರೆ, ಬಸವರಾಜ ಸಬರದರೇ ಗಬ್ಬು ವಾಸನೆ ಬರುವಾಗ ಜಗತ್ತಿನ ಗಬ್ಬು ವಾಸನೆ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕ ಹಕ್ಕಿದೆ? ನೀವೇ ಹೇಳಿ..
ಸ್ನೇಹಿತ ಸ್ನೇಹಿತಿಯರೇ ಇಂತಹದ್ದೇ ಸ್ಪೋಟಕ ಸಿದ್ದಿಗಳೊಂದಿಗೆ ಇನ್ನಷ್ಟು ಅಧ್ಯಾಪಕರ ಬಣ್ಣವನ್ನು ಬಯಲು ಮಾಡಲು ವಿಶ್ವವಿದ್ಯಾಲಯಗಳ ದಿನಚರಿ ಬದ್ದವಾಗಿದೆ. ಮುಂದಿನ ಬರಹಗಳಿಗಾಗಿ ಕಾಯುತ್ತಿರಿ.
ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ: ಸಂಪರ್ಕಕ್ಕೆ: visvavidyalayagaladinachari@gmail.com

Friday, June 17, 2011

ಹುಡುಗನಿಗೆ ಮನೆಕೆಲಸ; ಹುಡುಗಿಯಿಂದ `ಸಹಕಾರ'

-ಶಿವರಂಜನ ಸತ್ಯಂಪೇಟೆ

`ನೀನು ಟೂರ್‌ಗೆ ಬರಲೇಬೇಕು. ಆದರೆ ಜೊತೆಯಲ್ಲಿ ನಿನ್ನ ಗಂಡನನ್ನು ಕರೆ ತರಬಾರದು~. `ನಿನ್ನ ಮಾರ್ಕ್ಸ್ ಕಾರ್ಡ್ ಬೇಕಾದರೆ ಸಂಜೆ 5 ಗಂಟೆಗೆ ಡಿಪಾರ್ಟ್‌ಮೆಂಟ್‌ಗೆ ಬಾ. ಹುಡುಗರಿದ್ದಾಗ ಭೇಟಿಯಾಗಬೇಡ. ಒಬ್ಬಳೇ ಭೇಟಿಯಾಗು~. `ನೀನು ಹಸಿರು ಬಣ್ಣದ ಚೂಡಿದಾರ್‌ನಲ್ಲಿ ತುಂಬಾ  ಸ್ಮಾರ್ಟ್ ಆಗಿ ಕಾಣಿಸ್ತಿಯಾ. ಅದನ್ನೇ ಹಾಕಿಕೊಂಡು ಬಾ~. `ನಿನ್ನ ಪಿಎಚ್‌ಡಿ ಪದವಿ ಅವಾರ್ಡ್ ಆಗಬೇಕಾದರೆ ನೀನು ಎರಡು ತೊಲ ಬಂಗಾರ ಕೊಡಲೇಬೇಕು. ಎಂಎಸ್ಸಿಯಲ್ಲಿ ಗೋಲ್ಡ್ ಮೆಡಲ್ ಪಡೆಯಬೇಕಾದರೆ ನನ್ನ ಹೆಂಡತಿ ಸೀರೆ ಒಗೆಯಬೇಕು~....

-ಇವು ಗುಲ್ಬರ್ಗ ವಿಶ್ವವಿದ್ಯಾಲಯದ ಕೆಲವು ಅಧ್ಯಾಪಕರು ಮಾರ್ಗದರ್ಶನಕ್ಕಾಗಿ ತಮ್ಮ ಬಳಿ ಬರುವ  ವಿದ್ಯಾರ್ಥಿನಿಯರ ಎದುರು ಉದುರಿಸುವ ನುಡಿಮುತ್ತುಗಳು.

`ಹುಡುಗಿಯರನ್ನು ನೋಡಿದಾಕ್ಷಣ  ಕರಗುವ, ಅವರನ್ನು ಹೇಗೆ ಒಲಿಸಿಕೊಳ್ಳಬಹುದೆಂದು ಸಂಚು ನಡೆಸುವ, ಅವರ ಪರ್ಸ್ ಜಗ್ಗುವ, ಹೆಗಲ ಮೇಲೆ ಕೈಹಾಕುವ, ಲೈಂಗಿಕವಾಗಿ ಪೀಡಿಸುವ ಬಹಳಷ್ಟು ಪ್ರಾಧ್ಯಾಪಕರನ್ನೇ ನಾವು ಹೆಚ್ಚಾಗಿ ಕಾಣಬಹುದು~ ಎಂಬುದು ಹೆಸರು ಹೇಳಲು ಭಯಪಡುವ ಸಂಶೋಧನಾ ವಿದ್ಯಾರ್ಥಿನಿಯ ಮನದಾಳದ ಅಳಲು.  

ವಿಶ್ವವಿದ್ಯಾಲಯದ ಆಡಳಿತ ನಡೆಸುವ ಮುಖ್ಯಸ್ಥರೇ ಶಟಲ್ ಕಾಕ್ ಆಡುವಾಗ ಸಂಶೋಧನಾ ವಿದ್ಯಾರ್ಥಿನಿಯೊಬ್ಬಳ ಸಲುಗೆಯಿಂದ ಇದ್ದದ್ದು, ಆ ಮೇಲೆ ಅವರ ಹೆಂಡತಿಯೇ ಬಂದು ಕಪಾಳಮೋಕ್ಷ ಮಾಡಿದ್ದು, ಮನೆ ಕೆಲಸದಾಕೆಯ ಮೇಲೆಯೇ ಎರಗಿ ಬಿದ್ದದ್ದು, ಮೌಲ್ಯಮಾಪನ ಮಾಡಲು ಬಂದ ಉಪನ್ಯಾಸಕಿಯರ ಮೇಲೆ `ಕಣ್ಣಿಟ್ಟು~ ಪೀಡಿಸಿದ್ದು... ಮೊದಲಾದ ಘಟನೆಗಳು ಆಗಾಗ ಇಲ್ಲಿ ಗುಲ್ಲೆಬ್ಬಿಸುತ್ತದೆ.

ಆರಂಭದಿಂದ ಇಲ್ಲಿಯವರೆಗೆ ಇಂಥ ಸಾಕಷ್ಟು ಲೈಂಗಿಕ  ಪ್ರಕರಣಗಳು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಘಟಿಸಿವೆ. ಆದರೆ ಇವು ಯಾವುದೂ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ.  ಅಂತೆಯೇ `ಹುಡುಗನಾದರೆ ಇದ್ದರೆ ಮನೆಗೆಲಸ ಮಾಡಬೇಕು. ಶ್ರೀಮಂತರಿದ್ದರೆ ಹಣ ಕೊಡಬೇಕು. ಹುಡುಗಿಯಾದರೆ  ಗೈಡ್‌ಗಳಿಗೆ `ಸಹಕರಿಸಬೇಕು~. ಅಂದಾಗ ಮಾತ್ರ ನಿಮ್ಮ ಸಂಶೋಧನಾ ಕಾರ್ಯ ಪೂರ್ಣಗೊಳ್ಳಲು ಸಾಧ್ಯ~- ಎಂಬ ಮಾತು ಕ್ಯಾಂಪಸ್ಸಿನಲ್ಲಿ ಕೇಳಿ ಬರುತ್ತಿವೆ.

ಯುಜಿಸಿಯ ಕಡ್ಡಾಯ ಕರಾರಿನ ಅನ್ವಯ 2009ರಿಂದ ಕಾರ್ಯಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಸಮಿತಿ  ರಚನೆಯಾಗಿದ್ದು, ಕಾನೂನು ಪರಿಣತರೂ ಇರುವ ಏಳು ಜನ ಸದಸ್ಯರು ಸಮಿತಿಯಲ್ಲಿದ್ದಾರೆ. `ಈವರೆಗೆ ಎರಡು ಪ್ರಕರಣಗಳು ಮಾತ್ರ ನಮ್ಮ ಸೆಲ್‌ನಲ್ಲಿ ದಾಖಲಾಗಿದ್ದು, ಸಂಬಂಧಿಸಿದವರ ಶಿಕ್ಷೆಗೆ ಕೂಡ ಶಿಫಾರಸು ಮಾಡಲಾಗಿದೆ. ಲೈಂಗಿಕ ಕಿರುಕುಳ ಎದುರಿಸುತ್ತಿರುವ ವಿದ್ಯಾರ್ಥಿನಿಯರು ಧೈರ್ಯವಾಗಿ ನಮ್ಮ ಸಮಿತಿಗೆ ದೂರು ಸಲ್ಲಿಸಬಹುದಾಗಿದೆ~ ಎಂದು ಸಮಿತಿ ಅಧ್ಯಕ್ಷೆ ಛಾಯಾ ದೇಗಾಂವಕರ್ ಹೇಳುತ್ತಾರೆ.

ವಿದ್ಯಾಕಾಶಿ'ಯಲ್ಲೂ `ಮಲಿನ ಗಂಗೆ'

ಪ್ರವೀಣ ಕುಲಕರ್ಣಿ, ಹುಬ್ಬಳ್ಳಿ

ಧಾರವಾಡಕ್ಕೆ `ವಿದ್ಯಾಕಾಶಿ~ ಎಂಬ ಹೆಸರನ್ನು ತಂದುಕೊಟ್ಟ ಕೀರ್ತಿ ಕರ್ನಾಟಕ ವಿಶ್ವವಿದ್ಯಾಲಯಕ್ಕೇ ಸಲ್ಲುತ್ತದೆ. `ಸದಾಸ್ಮರಣೀಯ ರಾದ ಡಿ.ಸಿ. ಪಾವಟೆಯವರು ನೈತಿಕತೆಯನ್ನೇ ಬುನಾದಿಯನ್ನಾಗಿ ಮಾಡಿಕೊಂಡು ಈ ಜ್ಞಾನದೇಗುಲವನ್ನು ಕಟ್ಟಿದರು~ ಎಂದು ವಿವಿಯ ಇತಿಹಾಸ ಬಲ್ಲ ಹಿರಿಯರು ಹೇಳುತ್ತಾರೆ. ಆದರೆ, ಇಲ್ಲಿನ ಕಳೆದ ಒಂದು ದಶಕದ ಬೆಳವಣಿಗೆಗಳನ್ನು ಅವಲೋಕಿಸಿದಾಗ ಇದುವರೆಗೆ ಭದ್ರವಾಗಿದ್ದ `ನೈತಿಕ~ ಬುನಾದಿ, ಬಿರುಕು ಬಿಟ್ಟಂತೆ ಭಾಸವಾಗುತ್ತಿದೆ. ಈ ಹತ್ತು ವರ್ಷಗಳಲ್ಲಿಯೇ ವಿವಿ ಅಂಗಳದಲ್ಲಿ ಆರು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ.

ಕುಲಪತಿಗಳವರೆಗೂ ದೂರು ಹೋಗಿರುವ ಆರು ಪ್ರಕರಣ ಪೈಕಿ ನಾಲ್ಕರಲ್ಲಿ ಆರೋಪ ಹೊತ್ತವರು ಆಗಲೇ `ನಿರ್ದೋಷಿ~ಗಳಾಗಿ ಹೊರಬಂದಿದ್ದಾರೆ. ಅದೇ ವಿವಿ ಅಂಗಳದಲ್ಲಿ ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿಕ್ಕ ಎರಡು ಪ್ರಕರಣಗಳ ವಿಚಾರಣೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ಇನ್ನೂ ನಡೆಯುತ್ತಿದೆ. ಅದರಲ್ಲಿ ಒಬ್ಬ ಆರೋಪಿ ಅಮಾನತಿನಲ್ಲಿದ್ದರೆ, ಮತ್ತೊಬ್ಬರು ಕೆಲಸ ಮಾಡುತ್ತಲೇ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ವಿವಿ ಕ್ಯಾಂಪಸ್‌ನಲ್ಲಿ, ಮೊದಲ ಸಲ ಲೈಂಗಿಕ ದೌರ್ಜನ್ಯದ ಕೂಗು ಜೋರಾಗಿ ಕೇಳಿಬಂದಿದ್ದು 2003ರಲ್ಲಿ. ಆರೋಪ ಎದುರಿಸಿದ್ದವರು ಪ್ರಾಧ್ಯಾಪಕ ಪ್ರೊ.ಎಸ್.ಎಸ್. ನರೇಗಲ್ ಅವರನ್ನು ಅಮಾನತುಗೊಳಿಸಲಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ್ದ ಪ್ರೊ.ಎಸ್. ಅಬ್ದುಲ್ ಕರೀಂ ನೇತೃತ್ವದ ಸಮಿತಿ ಅವರನ್ನು ನಿರ್ದೋಷಿ~ ಎಂದು ತೀರ್ಪು ನೀಡಿತ್ತು. ಅವರು ಈಗಲೂ ವಿವಿಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಮರುವರ್ಷವೇ, ಅಂದರೆ 2004ರಲ್ಲಿ, ಮತ್ತೊಂದು ದೌರ್ಜನ್ಯದ ಪ್ರಕರಣ ವರದಿಯಾಯಿತು. ಈ ಬಾರಿ ಆರೋಪ ಎದುರಿಸಿದವರು ಹಿರಿಯ ಅಧಿಕಾರಿ ಹೆಸರು ಜೆ.ಸಿ. ಕುಬಸದ. ದೂರು ನೀಡಿದ್ದು `ಡಿ~ ಗುಂಪಿನ ಮಹಿಳಾ ಉದ್ಯೋಗಿ. `ಈ ಆರೋಪದಲ್ಲಿ ಸತ್ಯಾಂಶ ಇಲ್ಲ~ ಎಂದು ತೀರ್ಪು ನೀಡಿದ ಸಮಿತಿ, `ಇಂತಹ ಆರೋಪಗಳು ಬರದಂತೆ ನೋಡಿಕೊಳ್ಳಬೇಕು~ ಎಂದು ಕುಬಸದ ಅವರಿಗೂ ಎಚ್ಚರಿಕೆ ನೀಡಿ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಅದರ ನಂತರ ಟಿ.ಟಿ. ಬಸವನಗೌಡ ಎಂಬ  ಸಹಾಯಕ ಪ್ರಾಧ್ಯಾಪಕರು ಮತ್ತು ಇನ್ನೊಬ್ಬ ಬೋಧಕೇತರ ಸಿಬ್ಬಂದಿ ಎಂ.ವಿ.ಮಾಳಮ್ಮನವರ ವಿರುದ್ಧವೂ ದೂರು ದಾಖಲಾದರೂ ಸಾಕ್ಷ್ಯಾಧಾರ ಸಾಲದೆ ಈ ಪ್ರಕರಣಗಳು ಬಿದ್ದುಹೋದವು.

ಕಳೆದ ವರ್ಷ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಲೋಕೇಶ ಅವರ ವಿರುದ್ಧ ದೂರು ದಾಖಲಾಗಿದ್ದು ವಿಚಾರಣೆ ನಡೆದಿದೆ. ಈ ಪ್ರಕರಣದ ಬಿಸಿ ತಣ್ಣಗಾಗುವ ಮೊದಲೇ  ರಾಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ.ಎಂ. ಹೊಸಮನಿ ಅವರ ವಿರುದ್ಧ ಆರೋಪ ಕೇಳಿಬಂತು. ತಮ್ಮ ವಿದ್ಯಾರ್ಥಿನಿಗೆ ಪಿಎಚ್‌ಡಿ ಪೂರೈಸಿಕೊಡಲು ಪಾರ್ಟಿ ಮಾಡಿಸುವ ಬೇಡಿಕೆ ಇಟ್ಟಿದ್ದಲ್ಲದೆ ಲೈಂಗಿಕ ಸಂಬಂಧದ ಆಕಾಂಕ್ಷೆಯನ್ನೂ ವ್ಯಕ್ತಪಡಿಸಿದ್ದರು ಎಂಬುದು ಅವರ ಮೇಲಿರುವ ದೂರು. 

ನಿವೃತ್ತ ಜಿಲ್ಲಾ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಹೊಸಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಲ್ಲಿಂದೀಚೆಗೆ ಹೊಸ ಪ್ರಕರಣಗಳು ವರದಿಯಾಗಿಲ್ಲ. ಹಾಗೆಂದು ದೌರ್ಜನ್ಯ ನಡೆದೇ ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ.

`ರಾಜ್ಯ ಸರ್ಕಾರದ ಆದೇಶದ ಪ್ರಕಾರ 2010ರ ಅಕ್ಟೋಬರ್ 26ರಂದು ವಿವಿಯಲ್ಲಿ `ಮಹಿಳಾ ದೌರ್ಜನ್ಯ ತಡೆ ಘಟಕ~ವನ್ನು ಸ್ಥಾಪಿಸಲಾಗಿದೆ. ದೌರ್ಜನ್ಯದ ದೂರುಗಳು ಬಂದರೆ ಆ ಘಟಕದ ಸದಸ್ಯರು ಸಭೆ ಸೇರಿ ತೀರ್ಮಾನ ಕೈಗೊಳ್ಳುತ್ತಾರೆ.

ಸದ್ಯ ಮನಃಶಾಸ್ತ್ರ ವಿಭಾಗದ ಪ್ರೊ.ವಿ.ಎ. ಅಮ್ಮಿನಭಾವಿ ಈ ಘಟಕದ ಮುಖ್ಯಸ್ಥರಾಗಿದ್ದಾರೆ. ಪ್ರಕರಣಗಳು ವಿಚಾರಣೆಯಲ್ಲಿರುವುದರಿಂದ ಹೆಚ್ಚೇನೂ ಮಾತನಾಡಲಾರೆ ಎಂದು ಹೇಳುತ್ತಾರೆ ವಿವಿಯ ಕುಲಸಚಿವ ಪ್ರೊ. ಎಸ್.ಬಿ. ಹಿಂಚಗೇರಿ

ದೂರು 26, ಶಿಕ್ಷೆ ಶೂನ್ಯ

ಸುದೇಶ ದೊಡ್ಡಪಾಳ್ಯ, ಮೈಸೂರು

 ಶತಮಾನದ ಹೊಸ್ತಿಲಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯ ಮಾರ್ಚ್ ತಿಂಗಳಲ್ಲಿ ಮಾಡಿದ್ದ ದೊಡ್ಡ ಸುದ್ದಿ ಶೈಕ್ಷಣಿಕ ಇಲ್ಲವೇ  ಮಹತ್ವದ ಸಾಧನೆಯ ಕಾರಣಕ್ಕಾಗಿ ಆಗಿರಲಿಲ್ಲ. ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರೊಬ್ಬರು ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಆಕೆ ಆತ್ಮಹತ್ಯೆಗೆ ಯತ್ನಿಸಿದ್ದರಿಂದ.
ಆರೋಪಿ ಪ್ರಾಧ್ಯಾಪಕ ಪದೇ ಪದೇ `ನನಗೆ ಏನೂ ಕೊಡಲ್ವಾ? ಪಾರ್ಟಿ ಕೊಡಿಸಲ್ವಾ?~ ಎಂದು ಪೀಡಿಸುತ್ತಲೇ ಇದ್ದ. `ಆಯ್ತು, ನನ್ನ ಪತಿ ಬರಲಿ, ಒಟ್ಟಿಗೆ ಹೋಗೋಣ~ ಎಂದು ವಿದ್ಯಾರ್ಥಿನಿ ಹೇಳಿದಾಗ, `ಅಂಥ ಪಾರ್ಟಿ ಬೇಡ, ನಾನು, ನೀನು ಇಬ್ಬರೇ ಇರುವ ಪಾರ್ಟಿ ಬೇಕು~ ಎನ್ನುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಒಮ್ಮೆ ಏಕಾಏಕಿ ವಿದ್ಯಾರ್ಥಿನಿ ಮನೆಗೆ ಹೋಗಿ ಅಸಭ್ಯವಾಗಿ ವರ್ತಿಸಿದ. ಈ ಕುರಿತು ಕುಲಪತಿಗೆ ದೂರು ನೀಡಿದಾಗ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿ ದೀರ್ಘಪತ್ರವನ್ನು ಬರೆದಿಟ್ಟು ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಕೂಡಲೇ ವಿಶ್ವವಿದ್ಯಾನಿಲಯ ಎಚ್ಚೆತ್ತುಕೊಂಡು ಪ್ರಾಧ್ಯಾಪಕನನ್ನು ಅಮಾತನುಗೊಳಿಸಿ ಈ ಕುರಿತು ವಿಚಾರಣೆಯನ್ನು ವಿಶ್ವವಿದ್ಯಾನಿಲಯದ `ಮಹಿಳಾ ದೌರ್ಜನ್ಯ ದೂರು ಸಮಿತಿ~ಗೆ ವಹಿಸಿತು.  ವಾರದ ಹಿಂದೆಯಷ್ಟೆ ಮಹಿಳಾ ದೌರ್ಜನ್ಯ ದೂರು ಸಮಿತಿ ವಿವಿಗೆ ಅಂತಿಮ ವರದಿಯನ್ನು ಸಲ್ಲಿಸಿದೆ.  ಕಳೆದ ಆರು ವರ್ಷಗಳಿಂದ ಈ ಸಮಿತಿ ಅಸ್ತಿತ್ವದಲ್ಲಿದ್ದು, ಇಲ್ಲಿಯವರೆಗೆ 26 ದೂರುಗಳನ್ನು ದಾಖಲಿಸಿಕೊಂಡಿದೆ. ಆದರೆ ಯಾವ ಪ್ರಕರಣದಲ್ಲಿಯೂ ಶಿಕ್ಷೆಯಾಗಿಲ್ಲ.

ವರ್ಷದ ಹಿಂದೆ ನಗರದ ಪ್ರತಿಷ್ಠಿತ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರಯೋಗಾಲಯದಲ್ಲಿ ವಿದೇಶಿ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದ. ಆಕೆ ಸಮಿತಿಗೆ ಲಿಖಿತ ದೂರು ನೀಡಿದಳು. ಪ್ರಾಧ್ಯಾಪಕ ಅಸಭ್ಯವಾಗಿ ವರ್ತಿಸಿರುವುದು ಸತ್ಯ ಎನ್ನುವುದು ವಿಚಾರಣೆಯಿಂದ ಸಾಬೀತಾಗಿ ಆತನಿಗೆ ಎಚ್ಚರಿಕೆ ನೀಡಲಾಯಿತಷ್ಟೆ.

ಒಳ ರಾಜಕೀಯ: ಈಗ ಸಮಿತಿಯಲ್ಲಿ ದಾಖಲಾಗಿರುವ ಎಲ್ಲ ದೂರುಗಳು ಸಾಚಾ ಎನ್ನುವಂತಿಲ್ಲ. ಏಕೆಂದರೆ ಅರ್ಧದಷ್ಟು ದೂರುಗಳು ಆಯಾ ಅಧ್ಯಯನ ವಿಭಾಗದ ಒಳ ರಾಜಕೀಯದ ಫಲವಾಗಿರುತ್ತವೆ. `ಆರು ವರ್ಷಗಳಿಂದ ಮಹಿಳಾ ದೌರ್ಜನ್ಯ ದೂರು ಸಮಿತಿ ಕೆಲಸ ಮಾಡುತ್ತಿದೆ. ಸಮಿತಿ ವಿವಿಗೆ ವರದಿಕೊಡಬಹುದೇ ಹೊರತು ಶಿಕ್ಷೆಯನ್ನಲ್ಲ~ ಎನ್ನುತ್ತಾರೆ ಸಮಿತಿಯ ಅಧ್ಯಕ್ಷೆ  ಡಾ.ಕೆ.ಯಶೋದರ. ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 162 ಕಾಲೇಜುಗಳಿವೆ. ಇಲ್ಲಿ ವ್ಯಾಸಂಗ ಮಾಡುತ್ತಿರುವವರಲ್ಲಿ ಶೇಕಡ 56ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಆದರೆ 2005 ರ ವರೆಗೆ ಇಲ್ಲಿ ಮಹಿಳಾ ದೌರ್ಜನ್ಯ ಕುರಿತ ಸಮಿತಿಯೇ ರಚನೆ ಇರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಸಮಿತಿಯನ್ನು ರಚಿಸಲಾಗಿದೆ. ಮೊದಲ ಬಾರಿಗೆ ಪ್ರೊ.ಚ.ಸರ್ವಮಂಗಳ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ 18, ಡಾ.ಕೆ.ಯಶೋದರ ಅವಧಿಯಲ್ಲಿ 8- ಹೀಗೆ ಒಟ್ಟು 26 ದೂರುಗಳು ದಾಖಲಾಗಿವೆ

ಆತ್ಮಹತ್ಯೆಗೆ ಶರಣು...

- ಪ್ರವೀಣ್ ಪಾಡಿಗಾರ್

ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಕೀಚಕಪ್ರವೃತ್ತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯವೂ ಮುಕ್ತವಾಗಿಲ್ಲ. ಬೆಳಕಿಗೆ ಬಂದ ಪ್ರಕರಣಗಳು ಎರಡು ಮಾತ್ರ. ಆದರೆ ಮುಚ್ಚಿಹೋದ ಪ್ರಕರಣಗಳ ಸಂಖ್ಯೆಯೂ ಸಾಕಷ್ಟಿದೆ ಎಂಬುದು ವಿ.ವಿ ಪ್ರಾಂಗಣದಲ್ಲಿ ಕೇಳಿ ಬರುವ ಮಾತು.

ಹಿರಿಯ ಉಪನ್ಯಾಸಕಿ ಸುಜಾತಾ 2008ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಅದನ್ನು ಮಾಮೂಲಿ ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸುಜಾತಾ ಬರೆದಿಟ್ಟಿದ್ದ ಡೈರಿ ಆರೋಪಿಗಳಿಗೆ ಉರುಳಾಯಿತು. ಆನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ ರಶೀದ್ ಅಹ್ಮದ್  ತಮ್ಮ ಗೆಳೆಯರ ಕೂಟದ ಜತೆಗೂಡಿ ಒಂಬತ್ತು ವರ್ಷ ಕಾಲ ನೀಡಿದ ಲೈಂಗಿಕ, ಮಾನಸಿಕ ಕಿರುಕುಳದ ಬಗ್ಗೆ  ಡೈರಿಯಲ್ಲಿ ಉಲ್ಲೇಖಿಸಿದ್ದರು. ಈ ಪತ್ರ ಸಿಕ್ಕಿದ ಬಳಿಕ ಆಕೆಯ ಕುಟುಂಬದವರು ದೂರು ನೀಡಿದ್ದರೂ ಪ್ರಭಾವಿಗಳ ಒತ್ತಡದಿಂದ ಪ್ರಕರಣ ಮುಚ್ಚಿ ಹೋಗಿತ್ತು.

 ಅಶ್ಲೀಲ ಇ-ಮೇಲ್: ಈ ಪ್ರಕರಣದ ಬೆನ್ನಲ್ಲೇ ಬಹಿರಂಗಗೊಂಡ ಇನ್ನೊಂದು ಆಘಾತಕಾರಿ ಅಂಶವೆಂದರೆ ಸ್ವತಃ ಆಗಿನ ಕುಲಪತಿಯವರ (ಪ್ರೊ.ಕೆ.ಎಂ.ಕಾವೇರಿಯಪ್ಪ) ಇ-ಮೇಲ್ ವಿಳಾಸದಿಂದ  ಸುಜಾತ ಅವರಿಗೆ ಅಶ್ಲೀಲ ಇ-ಮೇಲ್ ರವಾನೆ ಆಗಿದ್ದು. `ತಮ್ಮ  ಇ-ಮೇಲ್‌ನ ಪಾಸ್‌ವರ್ಡ್ ಕದ್ದು ಯಾರೋ ಈ ರೀತಿ ಮಾಡಿದ್ದಾರೆ ಎಂದು ಆಗಿನ ಕುಲಪತಿ ಸಮಜಾಯಿಷಿ ನೀಡಿ ಕೈ ತೊಳೆದುಕೊಂಡಿದ್ದರು.

ಪ್ರಕರಣಕ್ಕೆ ಮರುಜೀವ: ಈ ನಡುವೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೂಲಂಕಷ ತನಿಖೆಗೆ ಆಗ್ರಹಿಸಿತ್ತು. ಪ್ರಕರಣದ ಬಗ್ಗೆ ದಲಿತ ಸಂಘರ್ಷ ಸಮಿತಿಯು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿತ್ತು. ಆಯೋಗವು ಪ್ರಕರಣದ ತನಿಖೆ ಬಗ್ಗೆ ವರದಿ ಕೇಳಿದ್ದರಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಈಗ ಮತ್ತೆ ಪ್ರಕರಣದ ಬೆನ್ನುಹತ್ತಿದೆ.  ಪ್ರೊ. ರಶೀದ್ ಅಹ್ಮದ್ ಅವರನ್ನು ಪೊಲೀಸರು ಇತ್ತೀಚಿಗೆ ಬಂಧಿಸಿದ್ದಾರೆ.

ಹೈಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಸುಜಾತಾ, ಸಾಯುವ ಮುನ್ನ ಬರೆದ ಪತ್ರದ್ಲ್ಲಲಿ ಉಲ್ಲೇಖಿಸಿರುವ ವಿಶ್ವವಿದ್ಯಾಲಯದ ಇತರ ಸಿಬ್ಬಂದಿ ವಿರುದ್ಧವೂ ಕ್ರಮಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆಗಿನ ಕುಲಪತಿ ಇ-ಮೇಲ್ ವಿಳಾಸ ಅಶ್ಲೀಲ ಮೆಸೇಜ್ ರವಾನೆ ಆದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಶಿಕ್ಷೆಯಾದ ಪ್ರಕರಣ: ಸುಜಾತ ಆತ್ಮಹತ್ಯೆ ಪ್ರಕರಣ ಸುದ್ದಿಯಲ್ಲಿರುವಾಗಲೇ 2010ರಲ್ಲಿ ಬಯೋಸೈನ್ಸ್ ವಿಭಾಗದ ಇಬ್ಬರು ಸಂಶೋಧನಾ ವಿದ್ಯಾರ್ಥಿನಿಯರು (ಒಬ್ಬರು ದೆಹಲಿಯವರು) ಏಕಾಏಕಿ ಸಂಶೋಧನೆ ಮೊಟಕುಗೊಳಿಸಿ ಮನೆಗೆ ಮರಳಿದ್ದರು.

`ಸಂಶೋಧನೆಗೆ ಮಾರ್ಗದರ್ಶನ ಮಾಡುತ್ತಿರುವ ಸಹಾಯಕ ಪ್ರಾಧ್ಯಾಪಕ ಪ್ರೊ.ತಿಪ್ಪೇಸ್ವಾಮಿ ಅವರ ಲೈಂಗಿಕ ಕಿರುಕುಳದಿಂದಾಗಿ ಸಂಶೋಧನೆ ಮುಂದುವರಿಸುವುದು ಅಸಾಧ್ಯವಾಗಿದೆ~ ಎಂದು ಕುಲಪತಿಗೆ ಹಾಗೂ ಕುಲಾಧಿಪತಿಗಳಾದ ರಾಜ್ಯಪಾಲರಿಗೆ ದೂರು ನೀಡಿದ್ದರು.

ಸುಜಾತ ಪ್ರಕರಣದಿಂದ ಮೊದಲೇ ಕೆಸರು ಅಂಟಿಸಿಕೊಂಡಿದ್ದ ವಿಶ್ವವಿದ್ಯಾಲಯ ಈ ಬಾರಿ ಎಚ್ಚರಿಕೆ ವಹಿಸಿತು. ಆರೋಪಿ ಪ್ರೊ.ತಿಪ್ಪೇಸ್ವಾಮಿಯನ್ನು ಅಮಾನತುಗೊಳಿಸಿತು.

ಮೂವರು ಸದಸ್ಯರ ಸಮಿತಿ ನಡೆಸಿದ ತನಿಖೆಯಲ್ಲಿ ಪ್ರೊ.ತಿಪ್ಪೆಸ್ವಾಮಿ ತಪ್ಪೆಸಗಿರುವುದು ದೃಡಪಟ್ಟಿತು. ಈಗ ಪ್ರೊ.ತಿಪ್ಪೇಸ್ವಾಮಿ ಕಡ್ಡಾಯ ನಿವೃತ್ತಿ ಪಡೆದಿದ್ದಾರೆ. 

ಈ ಬೆಳವಣಿಗೆಗಳಾದ ಬಳಿಕ ವಿಶ್ವವಿದ್ಯಾಲಯ ಎಚ್ಚೆತ್ತುಕೊಂಡಿದೆ. ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿಯನ್ನು ಪುನರ್ ರಚಿಸಿದೆ. ಯುಜಿಸಿ ನಿಯಮಾವಳಿ ಪ್ರಕಾರ `ಡಾ.ಮುಷ್ತಿಯಾರಿ ಬೇಗಂ ಅಧ್ಯಕ್ಷತೆಯಲ್ಲಿ 15 ಸದಸ್ಯರನ್ನೊಳಗೊಂಡ ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯರ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿ, ಸರ್ಕಾರೇತರ ಸಂಘಟನೆಯ ಪ್ರತಿನಿಧಿ, ಪ್ರಾಧ್ಯಾಪಕಿಯರು ಹಾಗೂ ಕಾನೂನು ತಜ್ಞರು ಇದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಯಾವುದೇ ದೂರು ಬಂದರೂ ಸಮಿತಿ ವಿಚಾರಣೆ ನಡೆಸಲಿದೆ. ವಿದ್ಯಾರ್ಥಿಗಳು ನೇರವಾಗಿ ಕುಲಪತಿಗೆ ಅಥವಾ ಕುಲಸಚಿವರಿಗೆ ದೂರು ಸಲ್ಲಿಸುವುದಕ್ಕೂ ಅವಕಾಶವಿದೆ~ ಎಂದು ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ತಿಳಿಸಿದ್ದಾರೆ

ಲೈಂಗಿಕ ಹಗರಣ: ಶಿಷ್ಯೆಯರನ್ನು ಕಾಡುವ ಗುರುಗಳು

- ಪ್ರೊ. ಪಿ. ವೆಂಕಟರಾಮಯ್ಯ June 18, 2011 prajavani




ಗುರುಗಳು ದೇವರಿಗೆ ಸಮಾನ ಎಂದು ನಂಬಿಕೊಂಡು ಬಂದ ಪರಂಪರೆ ನಮ್ಮದು. ಗುರು ಮತ್ತು ಶಿಷ್ಯರ ಸಂಬಂಧ ಅಷ್ಟು ಪವಿತ್ರವಾದುದು. ಶಿಕ್ಷಣ ಕ್ಷೇತ್ರದಲ್ಲಿನ ಇಂತಹ ಉನ್ನತ ಪರಂಪರೆಯನ್ನು ಎತ್ತಿ ಹಿಡಿಯಬೇಕಾಗಿರುವುದು ನಮ್ಮ  ಉನ್ನತ ಶಿಕ್ಷಣ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು. ಆದರೆ ಅಲ್ಲಿ ನಡೆಯುತ್ತಿರುವುದು ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆ. ಶೈಕ್ಷಣಿಕ ಸಾಧನೆಯ ಮೂಲಕ ಪ್ರಚಾರದಲ್ಲಿರಬೇಕಾದ ವಿಶ್ವವಿದ್ಯಾಲಯಗಳು ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದಾಗಿ ಜನರಲ್ಲಿ ಹೇಸಿಗೆ ಹುಟ್ಟಿಸುತ್ತಿವೆ. ಸಮಾಜಕ್ಕೆ ಆದರ್ಶರಾಗಿ ಇರಬೇಕಾಗಿರುವ ಪ್ರಾದ್ಯಾಪಕರು ಅಪರಾಧಿಗಳ ಸಾಲಲ್ಲಿ ನಿಂತಿದ್ದಾರೆ. ಇದು ಇಡೀ ಗುರುಸಮೂಹ ಆತ್ಮಾವಲೋಕನ ನಡೆಸಬೇಕಾದ ಬೆಳವಣಿಗೆ.ಪಂಡಿತ ಜವಹರಲಾಲ್ ನೆಹರೂ ಪ್ರಕಾರ ವಿಶ್ವವಿದ್ಯಾಲಯಗಳು ಮಾನವತೆಗೆ, ಸಹನೆಗೆ, ತರ್ಕಕ್ಕೆ, ಅಭಿವೃದ್ಧಿಗೆ, ಹೊಸ ಚಿಂತನೆಗಳನ್ನು ಹುಟ್ಟುಹಾಕುವ ಸಾಹಸಕ್ಕೆ ಮತ್ತು ಸತ್ಯಾನ್ವೇಷಣೆಗಳಿಗೆ ಮೀಸಲಾಗಿರುವ ಕೇಂದ್ರಗಳು. ಸ್ವಾತಂತ್ರ್ಯಾನಂತರ ದೇಶದಲ್ಲಿ ಇಂತಹ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆ ಮೂಲಕ ಜನತೆಯಲ್ಲಿ ಉನ್ನತ ಶಿಕ್ಷಣ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಅನೇಕ ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿವೆ. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಜೊತೆಗೆ ಕಾಲೇಜುಗಳ ಸಂಖ್ಯೆಯೂ ಹೆಚ್ಚುತ್ತಲಿದೆ. ಸ್ವಾತಂತ್ರ್ಯ ಬಂದ ತರುಣದಲ್ಲಿ ಸುಮಾರು 70 ವಿಶ್ವವಿದ್ಯಾಲಯಗಳು ಮತ್ತು ಸುಮಾರು 3000 ಕಾಲೇಜುಗಳು ಇದ್ದ ಸ್ಥಿತಿಯಿಂದ ಇಂದು ಸುಮಾರು 400 ವಿಶ್ವವಿದ್ಯಾಲಯಗಳು ಮತ್ತು 20,000ಕ್ಕೂ ಮಿಗಿಲಾದ ಕಾಲೇಜುಗಳಿರುವ ಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾರಣದಿಂದ ಸಮಾಜದಲ್ಲಿ, ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಮೊಟ್ಟ ಮೊದಲ ಪೀಳಿಗೆ ಉನ್ನತ ಶಿಕ್ಷಣ ಪಡೆಯುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಮತ್ತೊಂದು ಆರೋಗ್ಯಕರ ಬದಲಾವಣೆಯೆಂದರೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು. ಅಷ್ಟೇ ಅಲ್ಲ, ಶಿಕ್ಷಣಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ಸಾಧನೆ ಮತ್ತು ಪ್ರತಿಭೆ ಪ್ರಂಶಸನೀಯ ಮಟ್ಟದಲ್ಲೂ ಇದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಹೆಣ್ಣಿಗೆ ಎಲ್ಲ ಕ್ಷೇತ್ರಗಳಲ್ಲಿ ಗಂಡಿಗೆ ಸಮನಾಗಿ ದುಡಿಯುವ ಸಾಮರ್ಥ್ಯ ಒದಗಿ ಬಂದಿರುವುದರಲ್ಲಿ ಆಶ್ಚರ್ಯವಿಲ್ಲ.

ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳು ಸಮರ್ಥವಾಗಿ ನಡೆಯುತ್ತಿವೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಪ್ರತಿಭಾನ್ವಿತ ಮಾನವ ಸಂಪನ್ಮೂಲ ಒದಗಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳ ಜೊತೆಗೆ  ಸಮಾನ ಮಟ್ಟದಲ್ಲಿ ನಿಲ್ಲುವ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡುವ ಹೊಣೆಗಾರಿಕೆಯು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಮೇಲಿದೆ.

ಸಂಶೋಧನಾ ಕ್ಷೇತ್ರದಲ್ಲಿ 70-80 ರ ದಶಕಗಳ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗ ನಮ್ಮ ವಿಶ್ವವಿದ್ಯಾಲಯಗಳಿಗೆ ಸಂಶೋಧನೆಗೆ ಬರುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಅವಕಾಶಗಳ ಜೊತೆಗೆ ಜಾಗತಿಕ ಮಟ್ಟದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಳಿಸುತ್ತಿರುವ ಸಾಧನೆಗಳೂ ಕೂಡ ನಮ್ಮ ವಿದ್ಯಾರ್ಥಿನಿಯರಿಗೆ ಪ್ರೇರಕವಾಗಿವೆ.

ಇತ್ತೀಚಿನ ವರ್ಷಗಳಲ್ಲಿ ನೊಬೆಲ್ ಮತ್ತಿತರ ಪಾರಿತೋಷಕ ಪಡೆಯುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಲಿದೆ. ಇದು ಸಾಹಿತ್ಯ, ಸಾಮಾಜಿಕ, ವಿಜ್ಞಾನ, ರಾಜಕೀಯ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುವ ಸಂಗತಿ. ಅಂತರ ರಾಷ್ಟೀಯ ಮಟ್ಟದಲ್ಲಿ ಕಂಡು ಬರುತ್ತಿರುವ ಮಹಿಳೆಯರ ಸಾಧನೆಗಳು ನಮ್ಮ ವಿದ್ಯಾರ್ಥಿನಿಯರಿಗೆ ಪ್ರೇರೇಪಣಾ ಪ್ರೋತ್ಸಾಹ ನೀಡುತ್ತಿದ್ದರೆ ಆಶ್ಚರ್ಯವಿಲ್ಲ.

ಸಂಶೋಧನೆ ಮೂಲಕ ಹೊಸ ಚಿಂತನೆ, ಆವಿಷ್ಕಾರ ಮಾಡುವ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದು ಉತ್ತಮ ಬೆಳವಣಿಗೆ. ದುರದೃಷ್ಟವಶಾತ್ ವಿಶ್ವವಿದ್ಯಾಲಯಗಳಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಕೆಲವು ಲೈಂಗಿಕ ಹಗರಣಗಳಿಂದ ಇಡೀ ವಿಶ್ವವಿದ್ಯಾಲಯ ವ್ಯವಸ್ಥೆಯೇ ಕ್ಷೋಭೆಗೊಂಡಿದೆಯೋ ಎಂಬ ಭಾವನೆ ಸಮಾಜದಲ್ಲಿ ಬಿಂಬಿತವಾಗುತ್ತಿದೆ. ಇದು ದುರದೃಷ್ಟಕರ. ಪ್ರತಿಯೊಬ್ಬ ಮಾನವನಲ್ಲಿಯೂ ಗಂಡು ಹೆಣ್ಣು ಒಳಗೊಂಡು, ಅರಿಷಡ್ವರ್ಗಗಳಿವೆ. ಈ ಅರಿಷಡ್ವರ್ಗಗಳಲ್ಲಿ ಮೋಹ ಮತ್ತು ಕಾಮ ಉಂಟು ಮಾಡುವ ಅನಾಹುತಗಳನ್ನು ಸರಿಪಡಿಸುವುದು ಕಷ್ಟ.

ಲೈಂಗಿಕ ಆಕರ್ಷಣೆಗೆ ಒಳಪಡುವುದು ಪುರುಷನ ಪ್ರಬಲ ದೌರ್ಬಲ್ಯ. ಇದು ಒಬ್ಬ ರಾಷ್ಟ್ರಾಧ್ಯಕ್ಷ, ಒಬ್ಬ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಅಧ್ಯಕ್ಷ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯಾರನ್ನೂ ಬಿಡುವುದಿಲ್ಲ. ಉನ್ನತ ಅಧಿಕಾರದಲ್ಲಿರುವವರು ಗಾಜಿನ ಮನೆಯಲ್ಲಿದ್ದಂತೆ. ಅವರು ಮಾಡುವ ಪ್ರತಿ ಕೆಲಸವನ್ನೂ ಹೊರ ಪ್ರಪಂಚ ಗಮನಿಸುತ್ತಿರುತ್ತದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿರುವವರ ಬಗ್ಗೆ ಅನೇಕ ನಿರೀಕ್ಷೆಗಳನ್ನು ಸಮಾಜ ಇಟ್ಟುಕೊಂಡಿರುತ್ತದೆ. ಈ ನಿರೀಕ್ಷೆ ಹುಸಿಮಾಡುವ ಘಟನೆಯನ್ನು ಸಮಾಜ ಗಂಭೀರವಾಗಿ ಪರಿಗಣಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಗೋಚರಿಸುತ್ತಿರುವ ಲೈಂಗಿಕ ಹಗರಣಗಳು ಹಿಂದಿನ ದಿನಗಳಲ್ಲಿ ಇರುತ್ತಿರಲಿಲ್ಲವೆಂದೇನೂ ಹೇಳಲಾಗದು. ಇಂತಹ ಘಟನೆಗಳು ಅಗೋಚರವಾಗಿ ಮುಚ್ಚಿಹೋಗುತ್ತಿದ್ದವು. ಪ್ರಾಯಶಃ, ಅತ್ಯಂತ ಕ್ರಿಯಾಶೀಲವಾಗಿರುವ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಜೊತೆಗೆ ದೇಶದಲ್ಲಿ ಮಹಿಳಾಪರವಾದ ಕಾನೂನುಗಳ ಜಾರಿಯ ಕಾರಣ ಸಣ್ಣ ಪುಟ್ಟ ಘಟನೆಗಳೂ ಕೂಡ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿವೆ. ಭಾರತೀಯ ಸಮಾಜದಲ್ಲಿ ಸ್ತ್ರೀಯರು ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಆಗಲಿ ಅಥವಾ ತಮ್ಮ ಲೈಂಗಿಕ ಪಾವಿತ್ರ್ಯತೆ ಹರಣವಾಗುವ ವಿಷಯವನ್ನಾಗಲಿ ತಮ್ಮ ವೈಯಕ್ತಿಕ ಗೌರವದ ದೃಷ್ಟಿಯಿಂದ ಸಾರ್ವಜನಿಕಗೊಳಿಸಲು ಹಿಂದೇಟು ಹಾಕುವ ಸಂಭವವೇ ಹೆಚ್ಚು. ಆದಾಗ್ಯೂ, ಅದು ಸಾರ್ವಜನಿಕವಾದರೆ ವಿಷಯ ಗಂಭೀರವಾಗಿರಲೇಬೇಕು. ಅಂತಹ ಘಟನೆಯನ್ನು ಖಂಡಿಸಲೇಬೇಕು. ಆದಾಗ್ಯೂ ಮಹಿಳಾ ಪರ ಕಾನೂನಿನ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುವಂತೆಯೂ ಇಲ್ಲ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿದ್ಯಾರ್ಥಿನಿಗೂ ಮಾರ್ಗದರ್ಶಕರಿಗೂ ಅತ್ಯಂತ ನಿಕಟ ಸಂಪರ್ಕವಿರುತ್ತದೆ. ಅದರಲ್ಲೂ ಪ್ರಯೋಗಶಾಲೆ ಆಧರಿತ ಸಂಶೋಧನೆಯೆಂದ ಮೇಲೆ ಅನೇಕ ಬಾರಿ ವಿದ್ಯಾರ್ಥಿನಿ ಮತ್ತು ಮಾರ್ಗದರ್ಶಕರು ಒಟ್ಟಿಗೆ ಇರುವ ಸಂದರ್ಭಗಳು ಬರುತ್ತಲೇ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಪುರುಷ ಮಾರ್ಗದರ್ಶಕನು ಸಂಶೋಧನಾ ವಿದ್ಯಾರ್ಥಿನಿ ಜೊತೆ ಕೆಲಸಮಾಡುವಾಗ ತನ್ನ ಅರಿಷಡ್ವರ್ಗಗಳಲ್ಲಿ ಮೋಹ ಮತ್ತು ಕಾಮಗಳನ್ನು ನಿಗ್ರಹಿಸುವ ಅಥವಾ ಹತೋಟಿಯಲ್ಲಿಟ್ಟುಕೊಳ್ಳಬೇಕಾದ ಮಾನಸಿಕ ದೃಢತೆ ರೂಢಿಸಿಕೊಳ್ಳಬೇಕು.

ಇದಾಗದಿದ್ದಲ್ಲಿ ತನ್ನ ಪ್ರಯೋಗಾಲಯದಲ್ಲಿ ಸಂಶೋಧನೆಗೆ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಕೂಡದು. ಆ ರೀತಿ ಆಗದಿದ್ದಲ್ಲಿ ತನ್ನ ವ್ಯಕ್ತಿತ್ವ ಎಷ್ಟರ ಮಟ್ಟಿಗೆ ಹರಾಜಾಗಬಹುದೆಂಬ ಪರಿಕಲ್ಪನೆ ಆತನಿಗೆ ಚೆನ್ನಾಗಿರಬೇಕು. ಅಷ್ಟೇ ಅಲ್ಲ, ಆತ ಆ ಸಮಸ್ಯೆಯಿಂದ ಹೊರ ಬಂದರೂ ಮುಂದಿನ ವಿದ್ಯಾರ್ಥಿ ಪೀಳಿಗೆ ಆ ವ್ಯಕ್ತಿಯನ್ನು ನೋಡುವ ದೃಷ್ಟಿಯೇ ಆತನಿಗೆ ಸತತವಾಗಿ ನೀಡುವ ಶಿಕ್ಷೆಯಾಗುವುದರಲ್ಲಿ ಸಂದೇಹವಿಲ್ಲ. ಈ ಪರಿಸ್ಥಿತಿ ನಮ್ಮ ಪ್ರಾಧ್ಯಾಪಕರಿಗೆ ಅಥವಾ ಸಂಶೋಧನಾ ಮಾರ್ಗದರ್ಶಕರಿಗೆ ಬೇಕೆ?
ವಿಶ್ವವಿದ್ಯಾಲಯದಲ್ಲಿ ಜರುಗಿರಬಹುದೆನ್ನುವ ಇಂತಹ ಘಟನೆಗಳು ಪ್ರಚಾರಗೊಂಡಾಗ ಕ್ಷೇತ್ರದಲ್ಲಿರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿರಬೇಕು.

ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕ್ಷೇತ್ರದ ಪರಿಚಯ ಮಾಡುವ ವಿಧಾನದಂತೆ ಮಾರ್ಗದರ್ಶಕರಿಗೆ ಸಂಶೋಧನಾ ಅಭ್ಯರ್ಥಿಗಳೊಡನೆ ಇಟ್ಟುಕೊಳ್ಳಬೇಕಾದ ಸಂಬಂಧಗಳ ಬಗ್ಗೆ ಮಾರ್ಗಸೂಚಿ ಕೊಡಲಾಗುವುದಿಲ್ಲ. ಇದು ವೈಯಕ್ತಿಕ ಜೀವನದ ಮೌಲ್ಯಗಳಿಗೆ ಸಂಬಂಧಿಸಿದ ಸಂಗತಿ. ಶಿಕ್ಷಣ ಕ್ಷೇತ್ರವನ್ನು ಯಾರಾದರೂ ಆಯ್ಕೆ ಮಾಡಿಕೊಂಡಾಗ ಅದಕ್ಕೆ ಸಂಬಂಧಿಸಿದ ಮೌಲ್ಯಗಳನ್ನು ಅವರು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಮೌಲ್ಯಾಧರಿತ ಜೀವನ ನಡೆಸದಿದ್ದರೆ ವ್ಯಕ್ತಿಯು ತನ್ನ ಅವನತಿ ಕಾಣುವುದರ ಜೊತೆಗೆ ವ್ಯವಸ್ಥೆಯ ಅವನತಿಗೂ ಕಾರಣನಾಗುತ್ತಾನೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರುವ ಒಟ್ಟು ಸಂಶೋಧನಾ ವಿದ್ಯಾರ್ಥಿನಿಯರ ಸಂಖ್ಯೆಗೆ ಹೋಲಿಸಿದರೆ ಹಗರಣಗಳ ಶೇಕಡಾ ಪ್ರಮಾಣ ಅತ್ಯಂತ ಕಡಿಮೆ ಇರಬಹುದು. ಆದರೆ ಹಗರಣಗಳೇ ಇಲ್ಲದ ಗುರಿ ನಮ್ಮದಾಗಿರಬೇಕು. ಆ ರೀತಿ  ಆದಾಗಲೇ ನಮ್ಮ ವಿಶ್ವವಿದ್ಯಾಲಯಗಳು ಆದರ್ಶ ಕಲಿಕಾ ಕೇಂದ್ರಗಳಾಗಲು ಸಾಧ್ಯ.

ಪಂಡಿತ ಜವಹರಲಾಲ್ ನೆಹರೂ ಪ್ರಕಾರ ವಿಶ್ವವಿದ್ಯಾಲಯಗಳು ಮಾನವತೆಗೆ, ಸಹನೆಗೆ, ತರ್ಕಕ್ಕೆ, ಅಭಿವೃದ್ಧಿಗೆ, ಹೊಸ ಚಿಂತನೆಗಳನ್ನು ಹುಟ್ಟುಹಾಕುವ ಸಾಹಸಕ್ಕೆ ಮತ್ತು ಸತ್ಯಾನ್ವೇಷಣೆಗಳಿಗೆ ಮೀಸಲಾಗಿರುವ ಕೇಂದ್ರಗಳು. ಸ್ವಾತಂತ್ರ್ಯಾನಂತರ ದೇಶದಲ್ಲಿ ಇಂತಹ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆ ಮೂಲಕ ಜನತೆಯಲ್ಲಿ ಉನ್ನತ ಶಿಕ್ಷಣ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಅನೇಕ ಕೇಂದ್ರ ಹಾಗೂ ರಾಜ್ಯ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡಿವೆ. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಜೊತೆಗೆ ಕಾಲೇಜುಗಳ ಸಂಖ್ಯೆಯೂ ಹೆಚ್ಚುತ್ತಲಿದೆ. ಸ್ವಾತಂತ್ರ್ಯ ಬಂದ ತರುಣದಲ್ಲಿ ಸುಮಾರು 70 ವಿಶ್ವವಿದ್ಯಾಲಯಗಳು ಮತ್ತು ಸುಮಾರು 3000 ಕಾಲೇಜುಗಳು ಇದ್ದ ಸ್ಥಿತಿಯಿಂದ ಇಂದು ಸುಮಾರು 400 ವಿಶ್ವವಿದ್ಯಾಲಯಗಳು ಮತ್ತು 20,000ಕ್ಕೂ ಮಿಗಿಲಾದ ಕಾಲೇಜುಗಳಿರುವ ಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾರಣದಿಂದ ಸಮಾಜದಲ್ಲಿ, ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಮೊಟ್ಟ ಮೊದಲ ಪೀಳಿಗೆ ಉನ್ನತ ಶಿಕ್ಷಣ ಪಡೆಯುವ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಮತ್ತೊಂದು ಆರೋಗ್ಯಕರ ಬದಲಾವಣೆಯೆಂದರೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು. ಅಷ್ಟೇ ಅಲ್ಲ, ಶಿಕ್ಷಣಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ಸಾಧನೆ ಮತ್ತು ಪ್ರತಿಭೆ ಪ್ರಂಶಸನೀಯ ಮಟ್ಟದಲ್ಲೂ ಇದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಹೆಣ್ಣಿಗೆ ಎಲ್ಲ ಕ್ಷೇತ್ರಗಳಲ್ಲಿ ಗಂಡಿಗೆ ಸಮನಾಗಿ ದುಡಿಯುವ ಸಾಮರ್ಥ್ಯ ಒದಗಿ ಬಂದಿರುವುದರಲ್ಲಿ ಆಶ್ಚರ್ಯವಿಲ್ಲ.

ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳು ಸಮರ್ಥವಾಗಿ ನಡೆಯುತ್ತಿವೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಪ್ರತಿಭಾನ್ವಿತ ಮಾನವ ಸಂಪನ್ಮೂಲ ಒದಗಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳ ಜೊತೆಗೆ  ಸಮಾನ ಮಟ್ಟದಲ್ಲಿ ನಿಲ್ಲುವ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡುವ ಹೊಣೆಗಾರಿಕೆಯು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಮೇಲಿದೆ.

ಸಂಶೋಧನಾ ಕ್ಷೇತ್ರದಲ್ಲಿ 70-80 ರ ದಶಕಗಳ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗ ನಮ್ಮ ವಿಶ್ವವಿದ್ಯಾಲಯಗಳಿಗೆ ಸಂಶೋಧನೆಗೆ ಬರುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಅವಕಾಶಗಳ ಜೊತೆಗೆ ಜಾಗತಿಕ ಮಟ್ಟದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಳಿಸುತ್ತಿರುವ ಸಾಧನೆಗಳೂ ಕೂಡ ನಮ್ಮ ವಿದ್ಯಾರ್ಥಿನಿಯರಿಗೆ ಪ್ರೇರಕವಾಗಿವೆ.

ಇತ್ತೀಚಿನ ವರ್ಷಗಳಲ್ಲಿ ನೊಬೆಲ್ ಮತ್ತಿತರ ಪಾರಿತೋಷಕ ಪಡೆಯುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಲಿದೆ. ಇದು ಸಾಹಿತ್ಯ, ಸಾಮಾಜಿಕ, ವಿಜ್ಞಾನ, ರಾಜಕೀಯ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುವ ಸಂಗತಿ. ಅಂತರ ರಾಷ್ಟೀಯ ಮಟ್ಟದಲ್ಲಿ ಕಂಡು ಬರುತ್ತಿರುವ ಮಹಿಳೆಯರ ಸಾಧನೆಗಳು ನಮ್ಮ ವಿದ್ಯಾರ್ಥಿನಿಯರಿಗೆ ಪ್ರೇರೇಪಣಾ ಪ್ರೋತ್ಸಾಹ ನೀಡುತ್ತಿದ್ದರೆ ಆಶ್ಚರ್ಯವಿಲ್ಲ.

ಸಂಶೋಧನೆ ಮೂಲಕ ಹೊಸ ಚಿಂತನೆ, ಆವಿಷ್ಕಾರ ಮಾಡುವ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದು ಉತ್ತಮ ಬೆಳವಣಿಗೆ. ದುರದೃಷ್ಟವಶಾತ್ ವಿಶ್ವವಿದ್ಯಾಲಯಗಳಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಕೆಲವು ಲೈಂಗಿಕ ಹಗರಣಗಳಿಂದ ಇಡೀ ವಿಶ್ವವಿದ್ಯಾಲಯ ವ್ಯವಸ್ಥೆಯೇ ಕ್ಷೋಭೆಗೊಂಡಿದೆಯೋ ಎಂಬ ಭಾವನೆ ಸಮಾಜದಲ್ಲಿ ಬಿಂಬಿತವಾಗುತ್ತಿದೆ. ಇದು ದುರದೃಷ್ಟಕರ. ಪ್ರತಿಯೊಬ್ಬ ಮಾನವನಲ್ಲಿಯೂ ಗಂಡು ಹೆಣ್ಣು ಒಳಗೊಂಡು, ಅರಿಷಡ್ವರ್ಗಗಳಿವೆ. ಈ ಅರಿಷಡ್ವರ್ಗಗಳಲ್ಲಿ ಮೋಹ ಮತ್ತು ಕಾಮ ಉಂಟು ಮಾಡುವ ಅನಾಹುತಗಳನ್ನು ಸರಿಪಡಿಸುವುದು ಕಷ್ಟ.

ಲೈಂಗಿಕ ಆಕರ್ಷಣೆಗೆ ಒಳಪಡುವುದು ಪುರುಷನ ಪ್ರಬಲ ದೌರ್ಬಲ್ಯ. ಇದು ಒಬ್ಬ ರಾಷ್ಟ್ರಾಧ್ಯಕ್ಷ, ಒಬ್ಬ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಅಧ್ಯಕ್ಷ, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯಾರನ್ನೂ ಬಿಡುವುದಿಲ್ಲ. ಉನ್ನತ ಅಧಿಕಾರದಲ್ಲಿರುವವರು ಗಾಜಿನ ಮನೆಯಲ್ಲಿದ್ದಂತೆ. ಅವರು ಮಾಡುವ ಪ್ರತಿ ಕೆಲಸವನ್ನೂ ಹೊರ ಪ್ರಪಂಚ ಗಮನಿಸುತ್ತಿರುತ್ತದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿರುವವರ ಬಗ್ಗೆ ಅನೇಕ ನಿರೀಕ್ಷೆಗಳನ್ನು ಸಮಾಜ ಇಟ್ಟುಕೊಂಡಿರುತ್ತದೆ. ಈ ನಿರೀಕ್ಷೆ ಹುಸಿಮಾಡುವ ಘಟನೆಯನ್ನು ಸಮಾಜ ಗಂಭೀರವಾಗಿ ಪರಿಗಣಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಗೋಚರಿಸುತ್ತಿರುವ ಲೈಂಗಿಕ ಹಗರಣಗಳು ಹಿಂದಿನ ದಿನಗಳಲ್ಲಿ ಇರುತ್ತಿರಲಿಲ್ಲವೆಂದೇನೂ ಹೇಳಲಾಗದು. ಇಂತಹ ಘಟನೆಗಳು ಅಗೋಚರವಾಗಿ ಮುಚ್ಚಿಹೋಗುತ್ತಿದ್ದವು. ಪ್ರಾಯಶಃ, ಅತ್ಯಂತ ಕ್ರಿಯಾಶೀಲವಾಗಿರುವ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಜೊತೆಗೆ ದೇಶದಲ್ಲಿ ಮಹಿಳಾಪರವಾದ ಕಾನೂನುಗಳ ಜಾರಿಯ ಕಾರಣ ಸಣ್ಣ ಪುಟ್ಟ ಘಟನೆಗಳೂ ಕೂಡ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿವೆ. ಭಾರತೀಯ ಸಮಾಜದಲ್ಲಿ ಸ್ತ್ರೀಯರು ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಆಗಲಿ ಅಥವಾ ತಮ್ಮ ಲೈಂಗಿಕ ಪಾವಿತ್ರ್ಯತೆ ಹರಣವಾಗುವ ವಿಷಯವನ್ನಾಗಲಿ ತಮ್ಮ ವೈಯಕ್ತಿಕ ಗೌರವದ ದೃಷ್ಟಿಯಿಂದ ಸಾರ್ವಜನಿಕಗೊಳಿಸಲು ಹಿಂದೇಟು ಹಾಕುವ ಸಂಭವವೇ ಹೆಚ್ಚು. ಆದಾಗ್ಯೂ, ಅದು ಸಾರ್ವಜನಿಕವಾದರೆ ವಿಷಯ ಗಂಭೀರವಾಗಿರಲೇಬೇಕು. ಅಂತಹ ಘಟನೆಯನ್ನು ಖಂಡಿಸಲೇಬೇಕು. ಆದಾಗ್ಯೂ ಮಹಿಳಾ ಪರ ಕಾನೂನಿನ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುವಂತೆಯೂ ಇಲ್ಲ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿದ್ಯಾರ್ಥಿನಿಗೂ ಮಾರ್ಗದರ್ಶಕರಿಗೂ ಅತ್ಯಂತ ನಿಕಟ ಸಂಪರ್ಕವಿರುತ್ತದೆ. ಅದರಲ್ಲೂ ಪ್ರಯೋಗಶಾಲೆ ಆಧರಿತ ಸಂಶೋಧನೆಯೆಂದ ಮೇಲೆ ಅನೇಕ ಬಾರಿ ವಿದ್ಯಾರ್ಥಿನಿ ಮತ್ತು ಮಾರ್ಗದರ್ಶಕರು ಒಟ್ಟಿಗೆ ಇರುವ ಸಂದರ್ಭಗಳು ಬರುತ್ತಲೇ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಪುರುಷ ಮಾರ್ಗದರ್ಶಕನು ಸಂಶೋಧನಾ ವಿದ್ಯಾರ್ಥಿನಿ ಜೊತೆ ಕೆಲಸಮಾಡುವಾಗ ತನ್ನ ಅರಿಷಡ್ವರ್ಗಗಳಲ್ಲಿ ಮೋಹ ಮತ್ತು ಕಾಮಗಳನ್ನು ನಿಗ್ರಹಿಸುವ ಅಥವಾ ಹತೋಟಿಯಲ್ಲಿಟ್ಟುಕೊಳ್ಳಬೇಕಾದ ಮಾನಸಿಕ ದೃಢತೆ ರೂಢಿಸಿಕೊಳ್ಳಬೇಕು.

ಇದಾಗದಿದ್ದಲ್ಲಿ ತನ್ನ ಪ್ರಯೋಗಾಲಯದಲ್ಲಿ ಸಂಶೋಧನೆಗೆ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಕೂಡದು. ಆ ರೀತಿ ಆಗದಿದ್ದಲ್ಲಿ ತನ್ನ ವ್ಯಕ್ತಿತ್ವ ಎಷ್ಟರ ಮಟ್ಟಿಗೆ ಹರಾಜಾಗಬಹುದೆಂಬ ಪರಿಕಲ್ಪನೆ ಆತನಿಗೆ ಚೆನ್ನಾಗಿರಬೇಕು. ಅಷ್ಟೇ ಅಲ್ಲ, ಆತ ಆ ಸಮಸ್ಯೆಯಿಂದ ಹೊರ ಬಂದರೂ ಮುಂದಿನ ವಿದ್ಯಾರ್ಥಿ ಪೀಳಿಗೆ ಆ ವ್ಯಕ್ತಿಯನ್ನು ನೋಡುವ ದೃಷ್ಟಿಯೇ ಆತನಿಗೆ ಸತತವಾಗಿ ನೀಡುವ ಶಿಕ್ಷೆಯಾಗುವುದರಲ್ಲಿ ಸಂದೇಹವಿಲ್ಲ. ಈ ಪರಿಸ್ಥಿತಿ ನಮ್ಮ ಪ್ರಾಧ್ಯಾಪಕರಿಗೆ ಅಥವಾ ಸಂಶೋಧನಾ ಮಾರ್ಗದರ್ಶಕರಿಗೆ ಬೇಕೆ?

ವಿಶ್ವವಿದ್ಯಾಲಯದಲ್ಲಿ ಜರುಗಿರಬಹುದೆನ್ನುವ ಇಂತಹ ಘಟನೆಗಳು ಪ್ರಚಾರಗೊಂಡಾಗ ಕ್ಷೇತ್ರದಲ್ಲಿರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿರಬೇಕು. ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕ್ಷೇತ್ರದ ಪರಿಚಯ ಮಾಡುವ ವಿಧಾನದಂತೆ ಮಾರ್ಗದರ್ಶಕರಿಗೆ ಸಂಶೋಧನಾ ಅಭ್ಯರ್ಥಿಗಳೊಡನೆ ಇಟ್ಟುಕೊಳ್ಳಬೇಕಾದ ಸಂಬಂಧಗಳ ಬಗ್ಗೆ ಮಾರ್ಗಸೂಚಿ ಕೊಡಲಾಗುವುದಿಲ್ಲ. ಇದು ವೈಯಕ್ತಿಕ ಜೀವನದ ಮೌಲ್ಯಗಳಿಗೆ ಸಂಬಂಧಿಸಿದ ಸಂಗತಿ. ಶಿಕ್ಷಣ ಕ್ಷೇತ್ರವನ್ನು ಯಾರಾದರೂ ಆಯ್ಕೆ ಮಾಡಿಕೊಂಡಾಗ ಅದಕ್ಕೆ ಸಂಬಂಧಿಸಿದ ಮೌಲ್ಯಗಳನ್ನು ಅವರು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಮೌಲ್ಯಾಧರಿತ ಜೀವನ ನಡೆಸದಿದ್ದರೆ ವ್ಯಕ್ತಿಯು ತನ್ನ ಅವನತಿ ಕಾಣುವುದರ ಜೊತೆಗೆ ವ್ಯವಸ್ಥೆಯ ಅವನತಿಗೂ ಕಾರಣನಾಗುತ್ತಾನೆ. ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರುವ ಒಟ್ಟು ಸಂಶೋಧನಾ ವಿದ್ಯಾರ್ಥಿನಿಯರ ಸಂಖ್ಯೆಗೆ ಹೋಲಿಸಿದರೆ ಹಗರಣಗಳ ಶೇಕಡಾ ಪ್ರಮಾಣ ಅತ್ಯಂತ ಕಡಿಮೆ ಇರಬಹುದು. ಆದರೆ ಹಗರಣಗಳೇ ಇಲ್ಲದ ಗುರಿ ನಮ್ಮದಾಗಿರಬೇಕು. ಆ ರೀತಿ  ಆದಾಗಲೇ ನಮ್ಮ ವಿಶ್ವವಿದ್ಯಾಲಯಗಳು ಆದರ್ಶ ಕಲಿಕಾ ಕೇಂದ್ರಗಳಾಗಲು ಸಾಧ್ಯ.
(ಲೇಖಕರು ನಿವೃತ್ತ ಕುಲಪತಿಗಳು)

Wednesday, February 2, 2011

ವಿಶ್ವವಿದ್ಯಾಲಯಗಳ ದಿನಚರಿ

     
    ಸ್ನೇಹಿತರೆ, ಇದು ಹಲವು ಸ್ನೇಹಿತರು ಒಟ್ಟುಗೂಡಿ ಹುಟ್ಟು ಹಾಕಿರುವ ಬ್ಲಾಗ್ . ಇದರ ಹೆಸರೇ ಸೂಚಿಸುವಂತೆ ಇದು ಕರ್ನಾಟಕದ ವಿಶ್ವವಿದ್ಯಾಲಯಗಳ ದಿನಚರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ. ವಿಶ್ವವಿದ್ಯಾಲಯಗಳು ಮಾಡುವ ಒಳ್ಳೆಯ ಕೆಲಸಗಳನ್ನು ಜನರ ಗಮನಕ್ಕೆ ತರುವುದು, ಹಾಗೆಯೇ ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸಗಳ ಬಗ್ಗೆ ಎಚ್ಚರಿಸುವುದು, ಜಡಗೊಂಡ ಅದ್ಯಾಪಕರ, ಜಡಗೊಂಡ ಯೋಜನೆಗಳ  ಕಾರ್ಯ ವೈಖರಿಯನ್ನು ಗಮನಕ್ಕೆ ತರುವುದು ಮುಂತಾದ ವಿಶ್ವವಿದ್ಯಾಲಯಕ್ಕೆ ಸಂಬಂದಿಸಿದ ಬ್ಲಾಗ್ ಇದು. ಇಲ್ಲಿ ವಯಕ್ತಿಕ ದ್ವೇಶ ಸಾಧನೆಯಾಗಲಿ, ಕೆಲವರ ಪಕ್ಷಪಾತಿ ಗುಣವಾಗಲಿ ಇರುವುದಿಲ್ಲ. ಈ ನಮ್ಮ ಈಮೇಲ್‍ ವಿಳಾಸಕ್ಕೆ ಮೇಲ್‍ ಮಾಡಿದ ಬರಹಗಳನ್ನೂ ಇಲ್ಲಿ ಬ್ಲಾಗಿಗೆ ಹಾಕಿಕೊಳ್ಳಲಾಗುವುದು. ಆದರೆ ಆ ಬರಹಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಿದ ನಂತರವೇ ಅವುಗಳನ್ನು ಬ್ಲಾಗ್ ಗೆ ಪೋಷ್ಟ ಮಾಡಲಾಗುವುದು.
  ವಿಶ್ವವಿದ್ಯಾಲಯಗಳಿಗೆ ಸಂಬಂದಿಸಿದಂತೆ ಇದೊಂದು ಮುಕ್ತ ವೇದಿಕೆ. ಅಧ್ಯಾಪಕರುಗಳಿಂದ ಶೋಷಣೆಗೆ ಒಳಗಾದ ವಿದ್ಯಾರ್ಥಿಗಳು ತಮ್ಮ ಅಳನ್ನು ಈ ಬ್ಲಾಗ್ ಮೂಲಕ ತೋಡಿಕೊಳ್ಳಬಹುದು, ಅಂತೆಯೇ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಮಿತ್ರರ ತಪ್ಪು ನಡೆಗಳ ಬಗ್ಗೆ ಅಧ್ಯಾಪಕರೂ ಹೇಳಿಕೊಳ್ಳಬಹುದು.ಇದೊಂದು ಮುಕ್ತ ವೇದಿಕೆ. ಬರಹ ಮಾಡಿದವರು ಹೆಸರನ್ನು ಗೌಪ್ಯವಾಗಿಡಲು ಕೋರಿದರೆ, ಆ ಹೆಸರುಗಳ ಗೌಪ್ಯತೆಯನ್ನು ಕಾಪಾಡಲಾಗುವುದು. ಇದೀಗ ಬ್ಲಾಗ್ ಆರಂಭಿಸಿದ್ದೇವೆ. ಇದರ ನಡೆ ಹೇಗಿರುತ್ತದೆ ಎನ್ನುವ ಬಗ್ಗೆ ಸ್ವತಃ ನಮಗೂ ಕುತೂಹಲವಿದೆ.
-ವಿಶ್ವವಿದ್ಯಾಲಯಗಳ ದಿನಚರಿ ಬ್ಲಾಗಿಗರು.
visvavidyalayagaladinachari@gmail.com